ವರದಕ್ಷಿಣೆ ಕಿರುಕುಳದಿಂದ ಸಾವು ಸಾಬೀತಾದರೆ ಆರೋಪಿಗೆ ಶಿಕ್ಷೆ ಸಾಧ್ಯ

ಈ ಸುದ್ದಿಯನ್ನು ಶೇರ್ ಮಾಡಿ

sc

ನವದೆಹಲಿ,ನ.20- ವರದಕ್ಷಿಣೆಗಾಗಿ ಚಿತ್ರಹಿಂಸೆಗೆ ಗುರಿಯಾಗಿ ಮಹಿಳೆ ಮೃತಪಟ್ಟಿರುವುದು ಸಾಕ್ಷಾಧಾರ ಸಮೇತ ರುಜುವಾತಾದರೆ ಮಾತ್ರ ಸಾಕ್ಷಾಧಾರ ಕಾಯ್ದೆಯಡಿ ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯೊಬ್ಬನ ವಿರುದ್ಧ ಶಿಕ್ಷೆಯನ್ನು ದೃಢವೆಂದು ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.  ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಅಮಿತವ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ.

ಸಾಕ್ಷಾಧಾರ ಕಾಯ್ದೆಯಲ್ಲಿ ವರದಕ್ಷಿಣೆ ಕಿರುಕುಳಗಳಲ್ಲಿ ಶಿಕ್ಷೆಗಳನ್ನು ಖಾಯಂಗೊಳಿಸುವ ಮಾರ್ಪಾಡು ಉಪಬಂಧಗಳನ್ನು ಸೇರಿಸಲಾಗಿದೆ. ಮದುವೆಯಾದ ಏಳು ವರ್ಷಗಳ ಒಳಗೆ ವಿವಾಹಿತೆಯೂ ವರದಕ್ಷಿಣೆಗಾಗಿ ಕಿರುಕುಳಕ್ಕೆ ಒಳಗಾಗಿ ಮೃತಪಟ್ಟರೆ ಅದನ್ನು ಸಾಕ್ಷಾಧಾರ ಸಹಿತ ಪುರಾವೆ ಮಾಡಬೇಕು. ಆಗ ಮಾತ್ರ ಈ ಕಾಯ್ದೆಯಡಿ ವರದಕ್ಷಿಣೆ ಕಿರುಕುಳ ಸಾವು ಆರೋಪಕ್ಕೆ ಗುರಿಯಾದ ವ್ಯಕ್ತಿಯ ವಿರುದ್ಧ ದಂಡನೆಯನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಸುಪ್ರೀಂಕೋರ್ಟ್‍ನ ಈ ತೀರ್ಪಿನಿಂದಾಗಿ ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವ ಅಮಾಯಕರಿಗೆ ಇದರಿಂದ ನ್ಯಾಯ ಲಭಿಸುವಂತಾಗುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin