ವರದಕ್ಷಿಣೆ ಕಿರುಕುಳ ಮೂವರಿಗೆ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

punishmant

ಬೇಲೂರು, ನ.25- ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತಾಲೂಕಿನ ಅಂಗಡಿಹಳ್ಳಿ ಗ್ರಾಮದ ಮೂವರು ಆರೋಪಿಗಳಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 13,500 ರೂ.ಗಳ ದಂಡವನ್ನು ಬೇಲೂರು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ವಿಧಿಸಿದೆ.ತಾಲೂಕಿನ ಅಂಗಡಿಹಳ್ಳಿಯ ಅಣ್ಣಪ್ಪ, ಕಮಲಮ್ಮ, ಹನುಮಂತಯ್ಯ ಎಂಬುವವರೆ ಶಿಕ್ಷೆಗೊಳಗಾದ ಆರೋಪಿಗಳು. ಮೊದಲ ಆರೋಪಿ ಅಣ್ಣಪ್ಪನಿಗೆ ಗೌರಿ ಎಂಬುವವರನ್ನು ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ಸಂದರ್ಭದಲ್ಲಿ ಅಣ್ಣಪ್ಪನಿಗೆ ವರದಕ್ಷಿಣೆಯಾಗಿ 80 ಗ್ರಾಮ್ ಚಿನ್ನ, 1 ಲಕ್ಷ ನಗದು ಕೊಡಲಾಗಿತ್ತು. ಆದರೆ ಈ ಮೂವರು ವಿವಾಹವಾಗಿ 2 ತಿಂಗಳು ಮಾತ್ರ ಗೌರಿಯನ್ನು ಚೆನ್ನಾಗಿ ನೋಡಿಕೊಂಡು ನಂತರ ಪದೇ ಪದೆ ವರದಕ್ಷಿಣೆ ತರುವಂತೆ ಒತ್ತಾಯಿಸಿ

ಕೈ ಮತ್ತು ದೊಣ್ಣೆಯಿಂದ ಹೊಡೆದು ದೋಸೆ ಮಗಚುವ ಕೈಯನ್ನು ಕಾಯಿಸಿ ಕುತ್ತಿಗೆಗೆ ಬರೆ ಹಾಕಿ ಗಾಯಗೊಳಿಸಿ ಕಿರುಕುಳ ನೀಡಿದ್ದಲ್ಲದೆ, ನಿನ್ನನ್ನು ಕೊಲೆ ಮಾಡಿ ಬೇರೆ ವಿವಾಹ ಮಾಡುತ್ತೇವೆ ಎಂದು ಜಗಳ ತೆಗೆದು ಚಿತ್ರ ಹಿಂಸೆ ನೀಡಿದ್ದರು.ಸದರಿ ಪ್ರಕರಣದ ವಿಚಾರಣೆ ನಡೆಸಿದ ಬೇಲೂರು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಧೀಶರಾದ ವೆಂಕಟೇಶ್‍ನಾಯಕ್‍ರವರು ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 13,500 ರೂ.ಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ಗಾಯಾಳು ಗೌರಿಗೆ 12 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡಲು ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮೋತಿಲಾಲ್ ಚೌದರಿ ವಾದ ಮಂಡಿಸಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin