ವರ್ಗಾವಣೆ ರದ್ದುಗೊಂಡ ಖುಷಿಗೆ ಪೊಲೀಸ್ ಠಾಣೆಯಲ್ಲಿ ಗುಂಡು-ತುಂಡಿನ ಪಾರ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Drinks-01

ಹುಬ್ಬಳ್ಳಿ,ಅ14- ವರ್ಗಾವಣೆ ರದ್ದಾಗಿದ್ದ ಖುಯಲ್ಲಿ ಇನ್ಸ್ಪೆಕ್ಟರ್ ಓರ್ವರು ಠಾಣೆಯಲ್ಲಿಯೇ ರೌಡಿಶೀಟರ್ ಹಾಗೂ ಪಾಲಿಕೆ ಸದಸ್ಯನ ಹಾಗೂ ಸಿಬ್ಬಂದಿ ಜೊತೆ ಬಾಡೂಟ ಹಾಗೂ ಮದ್ಯ ಸೇಸಿದ ಘಟನೆ ನವನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇನ್ಸ್ಪೆಕ್ಟರ್ ಎಸ್.ಆರ್.ನಾಯಕ್ ಎಂಬುವವರು ತಮ್ಮ ವರ್ಗಾವಣೆ ರದ್ದುಗೊಂಡ ಹಿನ್ನಲೆಯಲ್ಲಿ ಈ ಪಾರ್ಟಿಯನ್ನು ಆಯೋಜಿಸಿದ್ದರು ಎನ್ನಲಾಗಿದೆ. ಮನಬಂದಂತೆ ಕುಡಿದು ತಿಂದು ಮಜಾ ಉಡಾಯಿಸಿದ್ದಾರೆ. ನಿನ್ನೆ ತಡ ರಾತ್ರಿಯವರೆಗೂ ಪಾರ್ಟಿ ನಡೆದಿದ್ದು, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಅವರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.  ಕಾನೂನು ಸುವ್ಯವಸ್ಥೆ ಕಾಪಾಡುವ ಆರಕ್ಷರು ಠಾಣೆಯೊಳಗೆ ಗುಂಡು ಪಾರ್ಟಿ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin