ವರ್ಷದ ಕೊನೆಯ ಮೋದಿ ಮನ್ ಕಿ ಬಾತ್ : ಧನ್ ವ್ಯಾಪಾರಿ-ಲಕ್ಕಿ ಗ್ರಾಹಕ ಯೋಜನೆಗೆ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ,ಡಿ.25– ನಗದು-ರಹಿತ ಮತ್ತು ಇ-ಪಾವತಿ ವಹಿವಾಟಿನಿಂದ ಭ್ರಷ್ಟಾಚಾರ-ಲಂಚಾವತಾರ ಕಡಿಮೆಯಾಗಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಕ್ರಿಸ್ಮಸ್ ದಿನವಾದ ಇಂದು ಧನ್ ವ್ಯಾಪಾರಿ ಮತ್ತು ಲಕ್ಕಿ ಗ್ರಾಹಕ್ ಎಂಬ ಎರಡು ವಿನೂತನ ಕ್ಯಾಶ್‍ಲೆಸ್ ಯೋಜನೆಗಳನ್ನು ಪ್ರಕಟಿಸಿದ್ದಾರೆ.   ಇಂದಿನಿಂದ ಇ-ಆಧಾರ್ ಆ್ಯಪ್ ವ್ಯವಹಾರ ಜಾರಿಗೆ ಬರಲಿದೆ. ಸಮಾಜದ ಎಲ್ಲ ವರ್ಗಗಳ ಜನರಿಗೆ ಹೊಸ ಯೋಜನೆಗಳಿಂದ ನೆರವಾಗಲಿದೆ. ಧನ್ ವ್ಯಾಪರಿ ಮತ್ತು ಲಕ್ಕಿ ಗ್ರಾಹಕ್ ಯೋಜನೆಗಳಿಂದ ಇ-ಪಾವತಿ ಹೆಚ್ಚಳವಾಗಲಿದೆ ಎಂದು ಮೋದಿ ಹೇಳಿದರು.
ದೇಶದ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಶುಭಾಷಯ ಕೋರಿ ಆಕಾಶವಾಣಿಯಲ್ಲಿ ಈ ವರ್ಷದ ತಮ್ಮ ಕೊನೆಯ ಹಾಗೂ 27ನೇ ಮನ್ ಕಿ ಬಾತ್(ಮನದ ಮಾತು) ಭಾಷಣ ಮಾಡಿದ ಅವರು, ದೇಶಾದ್ಯಂತ ಡಿಜಿಟಲ್ ವ್ಯವಸ್ಥೆ ಅಭಿಯಾನಕ್ಕೆ ಉತ್ತೇಜನ ನೀಡುವುದಾಗಿ ತಿಳಿಸಿದರು.

ನಗದು ರಹಿತ ವಹಿವಾಟಿನ ಬಗ್ಗೆ ಸಾಕಷ್ಟು ಕುತೂಹಲ ಕೆರಳಿದೆ. ಭಾರತವನ್ನು ಡಿಜಿಟಲೀಕರಣ ಮತ್ತು ಕ್ಯಾಶ್ ಲೆಸ್ ವ್ಯವಸ್ಥೆಯತ್ತ ಕೊಂಡೊಯ್ಯಲು ಜನರು ಸಹಕಾರ ನೀಡಬೇಕು ಎಂದು ಮೋದಿ ಕರೆ ನೀಡಿದರು.  ನಗದು ರಹಿತ ವಹಿವಾಟು ನಡೆಸುವ ಗ್ರಾಹಕರು ಮತ್ತು ವರ್ತಕರಿಗೆ ಆಕರ್ಷಕ ಬಹುಮಾನ ಯೋಜನೆ ಜಾರಿಗೊಳಿಸಲಾಗಿದೆ. 15 ಸಾವಿರ ಗ್ರಾಹಕರಿಗೆ ಒಂದು ಸಾವಿರ ರೂ. ಪ್ರೊತ್ಸಾಹ ಬಹುಮಾನವನ್ನು ನೀಡಲಾಗುವುದು ಎಂದು ಮೊದಿ ಹೇಳಿದರು.   ನಗದುರಹಿತ ವಹಿವಾಟಿನಿಂದ ಉತ್ತಮ ಭವಿಷ್ಯ ನಿರ್ಮಾಣವಾಗಲಿದೆ. ಇ-ಪೇಮೆಂಟ್ ಮತ್ತು ಕ್ಯಾಶ್‍ಲೆಸ್ ವಹಿವಾಟಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಈ ಮೂಲಕ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದರು.

ಕ್ಯಾಶ್‍ಲೆಸ್, ಇ-ಪಾವತಿ ಸೇರಿದಂತೆ ಡಿಜಿಟಲ್ ವ್ಯವಸ್ಥೆಗೂ ಹಾದಿ ಸುಗಮವಾಗಲಿದೆ ಅವರು ತಿಳಿಸಿದರು.  ನೋಟು ರದ್ಧತಿ ಬಳಿಕ 2ನೇ ಬಾರಿ ಮನ್ ಕಿ ಬಾತ್‍ನಲ್ಲಿ ಭಾಷಣ ಮಾಡಿದ ಅವರು ತಮ್ಮ ದಿಟ್ಟ ಕ್ರಮವನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin