ವಾಟ್ಸಪ್’ನಲ್ಲಿ ನೀವೀಗ ವಿಡಿಯೋ ಕಾಲಿಂಗ್ ಕೂಡ ಮಾಡಬಹುದು..?

ಈ ಸುದ್ದಿಯನ್ನು ಶೇರ್ ಮಾಡಿ

sdgSGG

ನವದೆಹಲಿ ಅ.22 : ಸಾಮಾಜಿಕ ಜಾಲತಾಣಗಲ್ಲೇ ಅತ್ಯಂತ ಹೆಚ್ಚು ಜನ ಉಪಯೋಗಿಸುತ್ತಿರುವ ವಾಟ್ಸಪ್ ಹೊಸ ಫ್ಯೂಚರ್ ನ್ನು ಅಪ್ ಡೇಟ್ ಮಾಡಿದೆ. ನೀವು ಬಹುದಿನಗಳಿಂದ ಕಾಯುತ್ತಿದ್ದ ವಿಡಿಯೋ ಸೇವೆಯನ್ನು ವಾಟ್ಸಪ್ ಆರಂಬಿಸಿದೆ ನಿರೀಕ್ಷೆಯಂತೆ ಪ್ರಾಯೋಗಿಕ ಹಂತದಲ್ಲಿದ್ದ ವಿಡಿಯೋ ಕರೆ ಈಗ ಬೇಟಾ ವರ್ಷನ್ ನಲ್ಲಿದ್ದು, ಸದ್ಯಕ್ಕೆ ವಿಂಡೋಸ್ ಫೋನ್ ಹೊಂದಿರುವವರು ಮಾತ್ರ ವಿಡಿಯೋ ಕಾಲಿಂಗ್ ಸೇವೆ ಪಡೆಯಬಹುದಾಗಿದೆ. ಆಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗೆ ಶೀಘ್ರದಲ್ಲೇ ವಿಡಿಯೋ ಕಾಲಿಂಗ್ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದೆ. ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ತೆಕ್ಕೆಗೆ ಬಿದ್ದ ಬಳಿಕ ವಾಟ್ಸಪ್ ನಲ್ಲಿ ಮಹತ್ತರ ಬದಲಾವಣೆಯಾಗತೊಡಗಿದೆ.

ಕೆಲವು ಬೇಟಾ ಟೆಸ್ಟರ್ಸ್ಸ್ ಈಗಾಗಲೇ ತಮ್ಮ ವಿಂಡೋಸ್ ಹ್ಯಾಂಡ್ ಸೆಟ್ಸ್ ನಲ್ಲಿ ವಿಡಿಯೋ ಕಾಲಿಂಗ್ ಆಪ್ಶನ್ ಬಂದಿರುವುದಾಗಿ ತಿಳಿಸಿದ್ದಾರೆ. ಬಳಕೆದಾರರಿಗೆ ಇದು 2 ಆಯ್ಕೆಗಳನ್ನು ನೀಡಿದೆ. ನೀವು ಆಪ್ ನಲ್ಲಿ ಕರೆ ಬಟನ್ ಅನ್ನು ಒತ್ತಿದಾಗ, ಅಲ್ಲಿ ಧ್ವನಿ ಮತ್ತು ವಿಡಿಯೋ ಕಾಲ್ ಎಂಬ ಆಯ್ಕೆಗಳಿರುತ್ತದೆ. ವಾಟ್ಸಪ್ ನಲ್ಲಿ ವೈಸ್ ಕಾಲಿಂಗ್ ಸೌಲಭ್ಯ ಈಗಾಗಲೇ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin