ವಾಟ್ಸಪ್ ನಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಚಿಂಪಾಜಿಗೆ ಹೋಲಿಸಿ ಅವಮಾನ

ಈ ಸುದ್ದಿಯನ್ನು ಶೇರ್ ಮಾಡಿ


ಹುಬ್ಬಳ್ಳಿ, ಜ.10- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಮೋಹನ ಹಿರೇಮನಿ ಅವರು ಹುಬ್ಬಳ್ಳಿ-ಧಾರವಾಡ ಮಹಿಳಾ ಕಾಂಗ್ರೆಸ್ ವಾಟ್ಸಪ್ ಗ್ರೂಪ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅವಮಾನ ಮಾಡಿದ ರೀತಿಯಲ್ಲಿ ಫೋಟೋ ಅಪ್ ಲೋಡ್ ಮಾಡಿ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಚಿಂಪಾಂಜಿಗೆ ಹೋಲಿಸಿ ಫೋಟೋ ಹಾಕಿದ ಕಾಂಗ್ರೆಸ್ ಕಾರ್ಪೊರೇಟರ್ ಮೋಹನ ಹಿರೇಮನಿ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು, ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳು ಇರುವ ವಾಟ್ಸಪ್ ಗ್ರೂಪ್‍ನಲ್ಲಿ ಅಪ್‍ಲೋಡ್ ಆಗುತ್ತಿದ್ದಂತೆ ಮಹಿಳಾ ಮಣಿಗಳಿಂದ ಕಾರ್ಪೊರೇಟರ್ ಗೆ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಸದಸ್ಯನ ವರ್ತನೆ ಕಂಡು ಗ್ರೂಪ್‍ನಿಂದ ಅವರನ್ನು ತೆಗೆದು ಹಾಕಿ ಕೂಡಲೇ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ.

CM-Chimpanji--01

ಇಂಧನ ಸಚಿವ ಡಿ.ಕೆ.ಶಿವಕುಮಾರ್ , ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಮತ್ತಿತರ ಘಟಾನುಘಟಿ ನಾಯಕರು ಇರೋ ವಾಟ್ಸಪ್ ಗ್ರೂಪ್‍ನಲ್ಲಿಯೇ ಸಿಎಂಗೆ ಅವಮಾನ ಮಾಡಿದ ಕಾರ್ಪೊರೇಟರ್ ಗೆ ಈಗ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

Facebook Comments

Sri Raghav

Admin