ವಾಟ್ಸಾಪ್ ನಲ್ಲಿ ಹರಿದಾಡಿತು ಗಾಯಕಿ ಎಸ್.ಜಾನಕಿ ಸಾವಿನ ಸುಳ್ಳು ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

janaki

ಚೆನ್ನೈ ಸೆ.22 : ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಹೆಸರಾಗಿರುವ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ವಿಧಿವಶ ಎಂದು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಸುಳ್ಳು ವದಂತಿ ಹರಡಿಸಲಾಗಿದೆ. ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಪ್ರಖ್ಯಾತರಾದ ಗಾಯಕಿ ಎಸ್. ಜಾನಕಿ ತನ್ನ ಹಾಡುಗಾರಿಕೆಗೆ ವಿದಾಯ ಹೇಳಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇದನ್ನೇ ನಂಬಿದ ಕೆಲವರು  ಎಸ್.ಜಾನಕಿಗೆ ಸಂತಾಪ ಸೂಚಿಸಿ ಶೇರ್ ಮಾಡುತ್ತಿದ್ದಾರೆ. ವಯಸ್ಸಾಗಿರುವುದರಿಂದ ಇನ್ನು ಹಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಾಕಷ್ಟು ಭಾಷೆಗಳಲ್ಲಿ ಹಾಡಿದ್ದೇನೆ. ಈಗ ನನ್ನ ಈ ವೃತ್ತಿಯನ್ನು ಬಿಟ್ಟು ವಿಶ್ರಾಂತಿ ಪಡೆಯಲು ಇಚ್ಛಿಸುತ್ತೇನೆ ಎಂದು ಜಾನಕಿ ಹೇಳಿದ್ದಾರೆ.

78ರ ಹರೆಯದ ಎಸ್.ಜಾನಕಿ 1957ರಲ್ಲಿ ‘ವಿದಿಯಿನ್ ವಿಲಯತ್ತು’ ಎಂಬ ತಮಿಳು ಚಿತ್ರದ ಮೂಲಕ ಎಸ್. ಜಾನಕಿ ತಮ್ಮ ಗಾಯನ ವೃತ್ತಿಯನ್ನು ಆರಂಭಿಸಿದ್ದು, ಬಳಿಕ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಒರಿಯಾ, ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ಸರಿ ಸುಮಾರು 48 ಸಾವಿರ ಹಾಡುಗಳನ್ನು ಹಾಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸುದೀರ್ಘವಾಗಿ ತನ್ನ ಹಾಡಿನ ಮೂಲಕ ಜನರ ಮನರಂಜಿಸಿದ  ಜಾನಕಿ ನೂರು ಕಾಲ ಸುಖವಾಗಿರಲಿ ಎಂಬುದೇ ನಮ್ಮ ಆಶಯ.

► Follow us on –  Facebook / Twitter  / Google+

Facebook Comments

Sri Raghav

Admin