ವಾತಪಿತ್ತ ಕಫ ನಿವಾರಣೆಗೆ ಮೂಲಂಗಿ ಮದ್ದು

ಈ ಸುದ್ದಿಯನ್ನು ಶೇರ್ ಮಾಡಿ

Radish

ಮೂಲಂಗಿ ಕಟು (ಖಾರ) ಮತ್ತು ಮಧುರ (ಸಿಹಿ) ರಸಗಳಿಂದ ಕೂಡಿದ್ದು ಉಷ್ಣವೀರ್ಯ, ತೀಕ್ಷ್ಣ ಗುಣವುಳ್ಳದ್ದಾಗಿದೆ. ಸುಲಭವಾಗಿ ಜೀರ್ಣವಾಗುವ ಇದು ಅಗ್ನಿ ದೀಪಕ ಎಂದರೆ ಜೀರ್ಣರಸವನ್ನು ವೃದ್ಧಿ ಮಾಡಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗಿ ಧಾತುಗತವಾಗುವಂತೆ ಮಾಡುತ್ತದೆ. ದೇಹದಲ್ಲಿ ಹೆಚ್ಚಾದ ವಾತ, ಪಿತ್ಥ, ಕಫ ದೋಷಗಳನ್ನು ಸಮಸ್ಥಿತಿಗೆ ತಂದು ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಅತಿಯಾಗಿ ಸೇವಿಸಿದಾಗ ಪಿತ್ಥದೋಷವನ್ನು ಹೆಚ್ಚು ಮಾಡುತ್ತದೆ.ಅಜೀರ್ಣ, ಜ್ವರ, ಮೂಲವ್ಯಾಧಿ, ಪೀನಸ(ನೆಗಡಿ-ಕೆಮ್ಮು), ಯಕೃತ್ ರೋಗ, ರಾಜಯಷ್ಠ (ಕ್ಷಯರೋಗ), ಹೃದ್ರೋಗ, ಗಂಟಲಿನ ರೋಗ ಮುಂತಾದ ಅನೇಕ ವ್ಯಾಧಿಗಳಲ್ಲಿ ಔಷಧಿಯಾಗಿ ಶ್ರೇಷ್ಠ ಪಥ್ಯಾಹಾರವಾಗಿ ಉಪಯೋಗಕ್ಕೆ ಬರುತ್ತದೆ. ಇದಲ್ಲದೆ ಅಜೀರ್ಣದಿಂದ ಉಂಟಾದ ಹೊಟ್ಟೆ ನೋವು, ಅತಿಸಾರ ಅಶ್ಮರಿ(ಮೂತ್ರದಲ್ಲಿ ಕಲ್ಲು) ಪಿತ್ತಕೋಶದಲ್ಲಿ ಕಲ್ಲು ಮುಂತಾದ ಇನ್ನೂ ಅನೇಕ ರೋಗಗಳಿಗೂ ಉತ್ತಮ ಔಷಧಿಯಾಗಿ ಮೂಲಂಗಿ ಉಪಯೋಗಕ್ಕೆ ಬರುತ್ತದೆ.
ಕಾಮಾಲೆಯಿಂದ ಕ್ಯಾನ್ಸರ್‍ವರೆಗೆ ಬಹುಪಾಲು ರೋಗಗಳಿಗೆ ಇದು ಒಂದು ಅತಿ ಶ್ರೇಷ್ಠ ಪಥ್ಯಾಹಾರ, ಮೂಲಂಗಿಯಿಂದ ತಯಾರಿಸುವ `ಕ್ಲಾರ’ ಅತಿ ತೀಕ್ಷ್ಣ ಗುಣದಿಂದ ಕೂಡಿದ್ದು, ಕ್ಯಾನ್ಸರ್, ಗುಲ್ಮ ಮುಂತಾದ ಮಹಾವ್ಯಾಧಿಗಳಿಗೂ ಉಪಯುಕ್ತ ಔಷಧಿವಾಗಬಲ್ಲದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin