ವಾಯುಪಡೆ ಬ್ಯಾಂಡ್‍

ಈ ಸುದ್ದಿಯನ್ನು ಶೇರ್ ಮಾಡಿ

IAF

ಬೆಂಗಳೂರು.ಆ.09 :  ಸ್ವಾತಂತ್ರ್ಯೋತ್ಸವದ  ಹಿನ್ನೆಲೆಯಲ್ಲಿ ವಾಯುಪಡೆಯಯಲಹಂಕ ಕೇಂದ್ರದ ವತಿಯಿಂದ ಬೆಂಗಳೂರಿನ ವೈಟ್‍ಫೀಲ್ಡ್‍ನಲ್ಲಿರುವಫೀನಿಕ್ಸ್ ಮಾಲ್‍ನಲ್ಲಿಇದೇ 11ರಂದು ಸಂಜೆ 7ರಿಂದ ರಾತ್ರಿ 8.30ರ ವರೆಗೆ ಬ್ಯಾಂಡ್ ಗೋಷ್ಠಿ ಆಯೋಜಿಸಲಾಗಿದೆ.  ಗತಕಾಲದ ವೈಭವದ ನೆನಪುಗಳು ಮರುಕಳಿಸುವಂತೆ ಮಾಡುವ ಕೆಲ ಅವಿಸ್ಮರಣೀಯ ಗೀತೆಗಳನ್ನು ವಾಯುಪಡೆ ಬ್ಯಾಂಡ್‍ನಕಲಾವಿದರು ನುಡಿಸಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಈ ಬ್ಯಾಂಡ್ ಗೋಷ್ಠಿ ರಾಷ್ಟ್ರನಿರ್ಮಾಣದಲ್ಲಿ ಭಾರತೀಯ ವಾಯುಪಡೆಯಅನನ್ಯಕೊಡುಗೆ ಹಾಗೂ ರಾಷ್ಟ್ರೀಯ ವಿಕೋಪಗಳ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ನೆರವಾಗುವಲ್ಲಿವಾಯುಪಡೆ ನಿರ್ವಹಿಸಿದ ಮಹತ್ವದ ಪಾತ್ರವನ್ನು ಬಿಂಬಿಸಲಿದೆ.ಸಾರ್ವಜನಿಕರಿಗೆ ಮುಕ್ತ ಪ್ರವೇಶಕಲ್ಪಿಸಲಾಗಿದೆ.

Facebook Comments

Sri Raghav

Admin