ವಾಯುಪಡೆ ಹಾಗೂ ನೌಕಾಪಡೆಗಳಲ್ಲೂ ಫ್ರಾನ್ಸ್ ಬಂಡವಾಳ ಹೂಡಿಕೆ
ಬೆಂಗಳೂರು, ಜ.9– ಮೆಟ್ರೋದೊಂದಿಗೆ ಎವಿ ಮತ್ತು ನೇವಿಯಲ್ಲಿಯೂ ಬಂಡವಾಳ ಹೂಡಲು ಉತ್ಸುಕರಾಗಿದ್ದೇವೆ ಎಂದು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್ಮಾರ್ಕ್ ಆಯರಾಲ್ಟ್ ತಿಳಿಸಿದ್ದಾರೆ. ಇಂದು ವಿಧಾನಸೌಧದ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಆಯರಾಲ್ಟ್ ಅವರನ್ನು ಮೆಟ್ರೋ ಎಂಡಿ ಪ್ರದೀಪ್ ಸಿಂಗ್ ಖರೋಲ ಸ್ವಾಗತ ಕೋರಿ ನಂತರ ಮೆಟ್ರೋದಲ್ಲಿ ಪ್ರಯಾಣ ಬೆಳೆಸುವ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾವು ಮೆಟ್ರೋಗೆ 300ಮಿಲಿಯನ್ ಬಂಡವಾಳ ಹೂಡಿದ್ದೇವೆ. ಮೆಟ್ರೋ ಜತೆಯಲ್ಲೇ ವಾಯು ಪಡೆ ಹಾಗೂ ನೌಕಾಪಡೆಗಳಲ್ಲೂ ಬಂಡವಾಳ ಹೂಡಲು ಉತ್ಸುಕವಾಗಿದ್ದು, ಇಲ್ಲಿನ ವಾತಾವರಣ ಪ್ರತೀಕೂಲವಾಗಿದೆ ಎಂದರು.
ಭಾರತ ಹಾಗೂ ಫ್ರಾನ್ಸ್ ನಡುವೆ ಉತ್ತಮ ಬಾಂಧವ್ಯ ಬೆಸೆದಿದೆ. ಇಲ್ಲಿನ ಬಂಡವಾಳ ಹೂಡಿಕೆಗೆ ನಮಗೂ ಸಹಮತವಿದೆ ಎಂದು ತಿಳಿಸಿದರು. ಇದೇ ವೇಳೆ ವಿಧಾನಸೌಧದಿಂದ ಮೆಟ್ರೋ ಮೂಲಕ ಎಂ.ಜಿ.ರಸ್ತೆವರೆಗೂ ವಿದೇಶಾಂಗ ಸಚಿವರೊಂದಿಗೆ ನಿಯೋಗವೂ ಪ್ರಯಾಣ ಬೆಳೆಸಿತು. ಎಂ.ಜಿ.ರಸ್ತೆಯ ರಂಗೋಲಿಗೂ ಭೇಟಿ ನೀಡಿ ಅಲ್ಲಿನ ಕಲಾಕೇಂದ್ರವನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ವಿದೇಶಾಂಗ ಸಚಿವರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.
Eesanje News 24/7 ನ್ಯೂಸ್ ಆ್ಯಪ್ – Click Here to Download