ವಾಯುವ್ಯ ಸಿರಿಯಾದಲ್ಲಿ ಆಸ್ಪತ್ರೆಗಳ ಮೇಲೆ ನಡೆದ ವಾಯುದಾಳಿಯಲ್ಲಿ 12 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

AirStrike-Hospitals

ಡೇರ್ ಶಾರ್ಕಿ, ಏ.29-ವಾಯುವ್ಯ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ನಿಯಂತ್ರಣದಲ್ಲಿರುವ ಪ್ರದೇಶಗಳ ಎರಡು ಆಸ್ಪತ್ರೆಗಳ ಮೇಲೆ ನಡೆದ ವಾಯುದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.   ಇನ್‍ಕ್ಯುಬೇಟರ್‍ನಲ್ಲಿದ್ದ ಎರಡು ಶಿಶುಗಳೂ ಸಹ ಈ ದಾಳಿಯಲ್ಲಿ ಅಸುನೀಗಿವೆ. ಉಗ್ರರ ವಶದಲ್ಲಿರುವ ಅದ್ಲಿಬ್ ಪಟ್ಟಣದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಸಂಭವಿಸಿದ 21 ಸಾವುಗಳಲ್ಲಿ ಈ ಮಾರಣಹೋಮವೂ ಸೇರಿದೆ.ರಷ್ಯಾ ವಿಮಾನದಂತೆ ಕಂಡುಬಂದ ಫೈಟರ್‍ಜೆಟ್ ಹೊರವಲಯದ ಆಸ್ಪತ್ರೆಯೊಂದರ ಮೇಲೆ ಮುಂಜಾನೆ ಸತತ ನಾಲ್ಕು ಬಾರಿ ದಾಳಿ ನಡೆಸಿತು ಎಂದು ಸ್ಥಳದಲ್ಲಿದ್ದ ಎಎಫ್‍ಪಿ ವರದಿಗಾರ ತಿಳಿಸಿದ್ದಾರೆ.   ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ನಾಗರಿಕರು ಬಲಿಯಾಗಿದ್ದಾರೆ, ಇನ್‍ಕ್ಯುಬೇಟರ್‍ಗೆ ಆಮ್ಲಜನಕ ಪೂರೈಸುತ್ತಿದ್ದ ಯಂತ್ರ ದಾಳಿಯಲ್ಲಿ ನಾಶಗೊಂಡ ನಂತರ ಎರಡು ಹಸುಳೆಗಳು ಮೃತಪಟ್ಟಿವೆ ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರೆಹಮಾನ್ ಹೇಳಿದ್ದಾರೆ.  ಈ ಪ್ರಾಂತ್ಯದ ಆಸ್ಪತ್ರೆಗಳ ಮೇಲೆ ವಾಯುದಾಳಿ ನಡೆಯುತ್ತಿರುವುದು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಮೂರನೆ ಬಾರಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin