ವಾರಣಾಸಿಯಲ್ಲಿ 10 ಲಕ್ಷ ರೂ. ಹೊಸ ನೋಟು ವಶ

ಈ ಸುದ್ದಿಯನ್ನು ಶೇರ್ ಮಾಡಿ

Seize-d

ವಾರಣಾಸಿ, ಜ.10-ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2,000 ರೂ.ಗಳ 10 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಚುನಾವಣೆಗಳು ಘೋಷಣೆಯಾಗಿರುವ ಉತ್ತರಪ್ರದೇಶದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಟ್ಟಿರುವ ಪೊಲೀಸರು ಶಂಕಾಸ್ಪದ ಕಾರೊಂದನ್ನು ತಡೆಗಟ್ಟಿ ಪರಿಶೀಲನೆ ನಡೆಸಿದಾಗ ಅದರಲ್ಲಿ 10 ಲಕ್ಷ ರೂ.ಗಳ ಹೊಸ ಕರೆನ್ಸಿಗಳು ಪತ್ತೆಯಾಯಿತು. ಕಾರಿನಲ್ಲಿದ್ದ ಇಬ್ಬರನ್ನು ಈ ಬಗ್ಗೆ ವಿಚಾರಿಸಿದಾಗ ಅವರ ಬಳಿ ಈ ಮೊತ್ತಕ್ಕೆ ಪೂರಕವಾದ ದಾಖಲೆಗಳು ಇರಲಿಲ್ಲ.  ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin