ವಾರಣಾಸಿ ಕಾಲ್ತುಳಿತ ಪ್ರಕರಣ : ಎಸ್‍ಪಿ ಸೇರಿ ಆರು ಅಧಿಕಾರಿಗಳ ಸಸ್ಪೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

Varanasi01

ಚೌಂಡೌಲಿ (ಉತ್ತರ ಪ್ರದೇಶ), ಅ. 16- ಧಾರ್ಮಿಕ ಆಚರಣೆ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಉಂಟಾದ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ವಾರಣಾಸಿ ನಗರ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಆರು ಪೊಲೀಸರನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಸ್ಪೆಂಡ್ ಮಾಡಿದ್ದಾರೆ. ಎಸ್‍ಪಿ (ಸಂಚಾರ) ಸುಧಾಕರ್ ಯಾದವ್, ಸರ್ಕಲ್ ಇನ್ಸ್‍ಪೆಕ್ಟರ್ ಕಮಲ್ ಕಿಶೋರ್, ಹಾಗೂ ರಾಮನಗರ್ ಮತ್ತು ಮುಗಲ್‍ಸರಾಯ್ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ರಾಹುಲ್ ಮಿಶ್ರಾ ಮತ್ತು ಸಿಬ್ಬಂದಿಯನ್ನು ಬೇಜವಾಬ್ದಾರಿ ಮತ್ತು ಭಕ್ತರ ಸಾವಿಗೆ ಕಾರಣರಾದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ಪ್ರಾಥಮಿಕ ಹಿನ್ನೆಲೆ ವರದಿ ಆಧಾರದ ಮೇಲೆ ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಅಖಿಲೇಶ್ ಯಾದವ್ ನಿನ್ನೆ ಈ ಘಟನೆ ಬಗ್ಗೆ ಒಬ್ಬ ದಂಡಾಧಿಕಾರಿಯವರಿಂದ ವಿಚಾರಣೆ ನಡೆಸುವಂತೆ ವಾರಣಾಸಿ ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin