ವಾರದಲ್ಲಿ ಅನಧಿಕೃತ ಕಟ್ಟಡ ಜಾಹೀರಾತು ತೆರವಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

9

ನರೇಗಲ್ಲ,ಫೆ.23- ಪಟ್ಟಣವನ್ನು ಸುಂದರವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುತ್ತಿದ್ದ ಭಿತ್ತಿ ಪತ್ರ, ಬಂಟಿಂಗ್ಸ್ ಹಾಗೂ ಬ್ಯಾನರಗಳನ್ನು ವಾರದೊಳಗೆ ತೆರವುಗೊಳಿಸಲು ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಆದೇಶಿಸಿದ್ದಾರೆ.ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಸಾರ್ವಜನಿಕವಾಗಿ ಕಾಣುವಂತೆ ಯಾವುದೇ ಸ್ವತ್ತಿನಲ್ಲಿ ಇರಿಸುವ, ನಿರ್ಮಿಸುವ ಯಾವುದೇ ಜಾಹಿರಾತು, ಭಿತ್ತಿ ಚಿತ್ರಗಳನ್ನು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೇ ಹಾಕುವುದನ್ನು ನಿಷೇಧಿಸಲಾಗಿದೆ. ಅನುಮತಿ ಹಾಗೂ ನಿಗದಿತ ಶುಲ್ಕ ಪಾವತಿ ಕಡ್ಡಾಯವಾಗಿರುತ್ತದೆ. ಪೂರ್ವಾನುಮತಿ ಪಡೆಯದೇ ಹೋದಲ್ಲಿ ಆರು ತಿಂಗಳವರೆಗೆ ವಿಸ್ತರಿಸಬಹುದಾದ ಸಜೆ, ದಂಡ ಅಥವಾ ಎರಡು ಶಿಕ್ಷೆಯನ್ನು ವಿಧಿಸಬಹುದಾದ  ಅಪರಾಧವಾಗುತ್ತದೆ ಎಂದರು.

ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ತರುವಂತ ಜಾಹಿರಾತು ಫಲಕಗಳು, ವೈಯಕ್ತಿಕ ಹಾಗೂ ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದಂತೆ ಭಿತ್ತಿಚಿತ್ರಗಳನ್ನು ಆಕ್ರಮವಾಗಿ ಹಾಕಲಾಗುತ್ತಿದ್ದು, ಇವುಗಳನ್ನು ನಿಗ್ರಹಿಸಿ ಬೇರೆ ಸ್ಥಳಗಳಿಂದ ಬರುವ ನಾಗರಿಕರ ದೃಷ್ಟಿಯಲ್ಲಿ ಸುಂದರವಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರು ಆದೇಶಿಸಿದ್ದು, ಅದರಂತೆ ಒಂದು ವಾರದ ಒಳಗಾಗಿ ಬಿತ್ತಿಪತ್ರ, ಬಂಟಿಂಗ್ಸ್ ಮತ್ತು ಬ್ಯಾನರ್ಸ ಅಳವಡಿಸಿದವರು ತೆರವುಗೊಳಿಸಲು ಸೂಚಿಸಲಾಗಿದೆ, ಒಂದು ವೇಳೆ ಮುಂದುವರಿಸಲಿಚ್ಚಿಸುವವರು ಪಟ್ಟಣ ಪಂಚಾಯತದಲ್ಲಿ ನಿಗದಿತ ಶುಲ್ಕ ಪಾವತಿಸಿ ಮುಂದುವರಿಸಬಹುದು ಎಂದರು. ಪಟ್ಟಣದಲ್ಲಿ ಹಲವು ಅನಧಿಕೃತ ಕಟ್ಟಡಗಳು, ಶಡ್, ಶಲ್ಟರ್‍ಗಳು ತಲೆಯೆತ್ತಿ ನಿಂತಿದ್ದು, ಅವುಗಳನ್ನು ಕೂಡಾ ತ್ವರಿತವಾಗಿ ತೆರವುಗೊಳಿಸಲು ಮುಖ್ಯಾಧಿಕಾರಿಗಳು ತಿಳಿಸಿದ್ದು ನಿಗದಿತ ಅವಧಿಯ ಒಳಗಾಗಿ ತೆರವುಗೊಳಿಸದೇ ಇದ್ದ ಸಂದರ್ಭದಲ್ಲಿ ಅಂತಹ ಕಟ್ಟಡ, ಶಡ್ ಹಾಗೂ ಶಲ್ಟರ್‍ಗಳನ್ನು ಪಪಂ ಅಧ್ಯಕ್ಷರನ್ನೊಳಗೊಂಡಂತೆ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ತೆರವಿಗೆ ಮುಂದಾಗಲಿದ್ದು ಸಂಬಂಧಿಸಿದವರು ತೆರವುಗೊಳಿಸಿಕೊಳ್ಳಬೇಕು ಎಂದರು.

ಪಪಂ ಅಧ್ಯಕ್ಷ ಸುನೀಲ ಬಸವರಡ್ಡೇರ ಮಾತನಾಡಿ ನಗರದ ಸೌಂದರ್ಯ ಕಾಯುವುದು ನಮ್ಮ ಜವಾಬ್ದಾರಿ, ಪಟ್ಟಣದಲ್ಲಿ ಹಲವು ದಿನಗಳಿಂದ ತಲೆನೋವಾಗಿದ್ದ ಬ್ಯಾನರ್ಸ ಮತ್ತು ಬಂಟಿಂಗ್ಸಗಳ ತೆರವು ನಾವೇ ಮಾಡಿಸಲು ಮುಂದಾಗಿದ್ದೆವು. ಅಷ್ಟರಲ್ಲಿ ಆದೇಶ ಬಂದಿರುವುದು ನಿಜಕ್ಕೂ ಸ್ವಾಗತಾರ್ಹ, ಈ ಕ್ರಮದಿಂದ ನಗರ ಸುಂದರವಾಗುವುದರ ಜೊತೆಗೆ ಪಟ್ಟಣ ಪಂಚಾಯತಿಗೂ ಆದಾಯ ಬರಲಿದ್ದು ಇದರಿಂದ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ರೀತಿಯ ಬ್ಯಾನರ್ಸ ಮತ್ತು ಬಂಟಿಂಗ್ಸ ಅಳವಡಿಸುವವರು ಪಟ್ಟಣ ಪಂಚಾಯತಿಗೆ ಸಹಕರಿಸಿ ಎಂದರು.ಪಪಂ ಸದಸ್ಯ ಯಲ್ಲಪ್ಪ ಮಣ್ಣೊಡ್ಡರ, ಸದಸ್ಯರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin