ವಾರಾಣಸಿ ಕಾಲ್ತುಳಿತ : ಸತ್ತವರ ಸಂಖ್ಯೆ 25 ಕ್ಕೇರಿಕೆ, ಮೃತರಿಗೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

Varanasi

ವಾರಾಣಸಿ. ಅ.15 : ಪ್ರಧಾನಿ ಮೋದಿ ಪ್ರತಿನಿಧಿಸುವ ಕ್ಷೇತ್ರ ವಾರಣಾಸಿಯಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ ಸತ್ತವನ ಸಂಖ್ಯೆ 25 ಕ್ಕೇರಿದೆ. ಧಾರ್ಮಿಕ ಯಾತ್ರೆಯೊಂದರ ವೇಳೆ ನೂಕುನುಗ್ಗಲಾಗಿ ಕಾಲ್ತುಳಿತದಿಂದ 25 ಮಂದಿ ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ ಉತ್ತರ ಪ್ರದೇಶದ ಸರ್ಕಾರ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದೆ. ಬಾಬಾ ಜೈ ಗುರು ದೇವ್ ಅವರನ್ನ ನೋಡಲು ಭಕ್ತರು ಮುಂದಾಗಿದ್ದು ನೂಕುನುಗ್ಗಲಿಗೆ ಕಾರಣವಾಗಿದೆ.

ರಾಜಘಾಟ್ ಸೇತುವೆ ಬಳಿ ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲದ್ದರಿಂದ ನೂಕುನುಗ್ಗಲನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಸಾವು ನೋವು ಹೆಚ್ಚಿನ ಪ್ರಮಾಣದಲ್ಲುಂಟಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. 3 ಸಾವಿರ ಜನರಿಗೆ ಅನುಮತಿ ಪಡೆದು ಕಾರ್ಯಕ್ರಮದಲ್ಲಿ 30 ಸಾವಿರ ಭಕ್ತರು ಬಾಗವಹಿಸಿದ್ದೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.   ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯೆಕ್ಷೆ ಸೋನಿಯಾಗಾಂಧಿ ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin