ವಾರ್ಧಾವತಾರ : ಸತ್ತವರ ಸಂಖ್ಯೆ 27ಕ್ಕೇರಿಕೆ, 1,000 ಕೋಟಿ ಪರಿಹಾರಕ್ಕಾಗಿ ತಮಿಳುನಾಡು ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

Chennai-01

ಚೆನ್ನೈ, ಡಿ.14-ಬಂಗಾಳಕೊಲ್ಲಿಯಲ್ಲಿ ಎದ್ದ ವಾರ್ದಾ ಚಂಡಮಾರುತ ಆರ್ಭಟಕ್ಕೆ ತಮಿಳುನಾಡಿನಲ್ಲಿ ಬಲಿಯಾದವರ ಸಂಖ್ಯೆ 27ಕ್ಕೇರಿದೆ. ಪ್ರಚಂಡ ವೇಗದ ಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ಸಂತ್ರಸ್ತರಾಗಿರುವ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ.   ಚಂಡಮಾರುತದಿಂದ ನಲುಗಿ ಹೋಗಿರುವ ತಮಿಳುನಾಡಿನಲ್ಲಿ ತುರ್ತು ಪರಿಹಾರಗಳನ್ನು ಕೈಗೊಳ್ಳಲು ತಕ್ಷಣ 1,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ನೈಸರ್ಗಿಕ ವಿಕೋಪ ಮತ್ತು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದಲೂ ಸೂಕ್ತ ಪರಿಹಾರಕ್ಕಾಗಿ ಅವರು ಒತ್ತಾಯಿಸಿದ್ಧಾರೆ ಅಲ್ಲದೇ ಹಾನಿ ಕುರಿತು ಅಧ್ಯಯನ ನಡೆಸಲು ಕೂಡಲೇ ಕೇಂದ್ರದಿಂದ ತಂಡವೊಂದನ್ನು ರವಾನಿಸುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ.

ಎನ್‍ಡಿಆರ್‍ಎಫ್ ಈವರೆಗೆ 15,000ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಸಂತ್ರಸ್ತರಿಗಾಗಿ 10 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.  ಕರಾವಳಿ ಪ್ರದೇಶಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ರೈಲು ಮತ್ತು ವಿಮಾನ ಸಂಚಾರ ಎಂದಿನಂತಿದೆ. ಆದರೆ ಕೆಲವೆಡೆ ಬೆಳಿಗ್ಗೆ ಟ್ರಾಫಿಕ್ ಜಾಮ್‍ನಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಕಿರಿಕಿರಿ ಅನುಭವಿಸಿದ್ದರು.

ಹೈದರಾಬಾದ್ ವರದಿ :

ವಾರ್ಧಾ ಅಬ್ಬರದಿಂದ ತತ್ತರಿಸಿದ್ದ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳೂ ಕೂಡ ಸಹಜ ಸ್ಥಿತಿಯತ್ತ ಧಾವಿಸಿದೆ. . ನೆಲ್ಲೂರು, ಮಚಲಿಪಟ್ಟಣ, ಚಿತ್ತೂರು, ಕಡಪ, ಕೃಷ್ಣಾ, ಪ್ರಕಾಶಂ, ಕರ್ನೂಲು ಜಿಲ್ಲೆಗಳಲ್ಲಿ ಮಳೆಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin