‘ವಾರ್ಧಾ’ವಿನಾಶ : ಪರಿಹಾರಕ್ಕಾಗಿ ಪ್ರಧಾನಿಗೆ ಪನ್ನೀರ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Vardha-03

ನವದೆಹಲಿ, ಡಿ.19- ತಮಿಳುನಾಡು ಕರಾವಳಿ ಪ್ರದೇಶಗಳ ಮೇಲೆ ಬಂದೆರಗಿದ ವಾರ್ಧಾ ಚಂಡಮಾರುತದಿಂದ ಅಪಾರ ಹಾನಿಯಾಗಿದ್ದು, 1000 ಕೋಟಿ ರೂ. ತುರ್ತು ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಇಂದು ಪ್ರಧಾನಿಯವರನ್ನು ಭೇಟಿ ಮಾಡಿದ ಅವರು, ತಮಿಳುನಾಡು ರಾಜ್ಯದಲ್ಲಿ ವಾರ್ಧಾ ಚಂಡಮಾರುತದಿಂದ ಉಂಟಾದ ಹಾನಿ, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವಿವರಿಸಿದರು. ತುರ್ತು ಪರಿಹಾರ ಕೈಗೊಳ್ಳಲು ತಕ್ಷಣ 1000 ಕೋಟಿ ರೂ.ಗಳನ್ನು ಹಾಗೂ ಪ್ರಧಾನಮಂತ್ರಿಯವರ ತುರ್ತು ಪರಿಹಾರ ನಿಧಿಯಿಂದಲೂ ನೆರವು ನೀಡುವಂತೆ ಕೋರಿದ್ದಾರೆ.

ಜಯಾಗೆ ಭಾರತರತ್ನಕ್ಕೆ ಮನವಿ: ತಮಿಳುನಾಡು ಮುಖ್ಯಮಂತ್ರಿಯಾಗಿ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿರುವ ಜಯಲಲಿತಾಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಪ್ರಧಾನಿಯವರಲ್ಲಿ ಕೋರಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin