ವಾಲ್ಮೀಕಿ ಗುರುಪೀಠಕ್ಕೆ 5 ಕೋಟಿ ಅನುದಾನ
ದಾವಣಗೆರೆ,ಸೆ.12-ನಗರದ ಬಿಟಿಲೇಔಟ್ನಲ್ಲಿ ನೂತನವಾಗಿ ನಿರ್ಮಾಣ ಮಾಡಲಿರುವ ವಾಲ್ಮೀಕಿ ಗುರುಪೀಠಕ್ಕೆ 5 ಕೋಟಿ ರೂ. ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ನಗರದ ಟ್ರಿಶೂಲ್ ಕಲಾಭವನದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಮುದಾಯ ಭವನಕ್ಕೆ 20 ಕೋಟಿ ರೂ. ವೆಚ್ಚವಾಗಲಿದ್ದು, ಸರ್ಕಾರದಿಂದ 5 ಕೋಟಿ ರೂ ಅನುದಾನವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದೇನೆ. ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ತಿಳಿಸಿದರು.
ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಪಕ್ಷ ಭೇದ ಮರೆತು ಸಮುದಾಯ ಭವನ ನಿರ್ಮಾಣ ಮಡುವುದಕ್ಕೆ ಸಹಾಯಧನ ಮಾಡಬೇಕು ಎಂದು ಮನವಿ ಮಾಡಿದರು. ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್ ಮಾತನಾಡಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಾಲ್ಮೀಕಿ ಗುರುಪೀಠಕ್ಕೆ 7 ಕೋಟಿ ರೂ. ಅನುದಾನ ನೀಡಿದ್ದರು. ಅಲ್ಲದೆ ಬಿಜೆಪಿ ಸರ್ಕಾರ ವಾಲ್ಮೀಕಿ ಗುರುಪೀಠಕ್ಕೆ ಸಹಾಯಹಸ್ತ ಚಾಚಿದ್ದರು ಎಂದು ಹೇಳಿದರು. ವಾಲ್ಮೀಕಿ ಜಯಂತಿಗೆ ಬಿಜೆಪಿ ಸರ್ಕಾರ ರಜೆ ಘೋಷಣೆ ಮಾಡಿತ್ತು. ಹೀಗಾಗಿ ಅದು ಈಗಲೂ ಮುಂದುವರೆದಿದೆ. ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡಿತ್ತು ಎಂದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಸ್.ಆಂಜನೇಯ, ಸಚಿವ ಜಾರಕಿಹೊಳಿ, ಶಾಸಕರಾದ ಎಸ್.ಪಿ.ರಾಜೇಶ್, ಶಿವಶಂಕರಪ್ಪ , ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
► Follow us on – Facebook / Twitter / Google+