ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ : ರಾಖಿ ಸಾವಂತ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Rakhi-Sawant

ಲೂದಿಯಾನ,ಏ.4-ಮಹಾಗ್ರಂಥ ರಾಮಾಯಣದ ಕತ್ರುೃ ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಿವಾದಾತ್ಮಕ ತಾರೆ ಬಾಲಿವುಡ್ ನಟಿ ರಾಖಿ ಸಾವಂತ್ ಅವರನ್ನು ಮುಂಬೈ ಪೊಲೀಸರು ಪಂಜಾಬ್ ಲೂದಿಯಾನದಲ್ಲಿ ಇಂದು ಬಂಧಿಸಿದ್ದಾರೆ.   ಟೆಲಿವಿಷನ್ ಶೋ ವೇಳೆ ರಾಖಿ ಸಾವಂತ್ ಅವರು ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಾಲ್ಮೀಕಿ ಜನಾಂಗದವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರು. ಮಾ.9ರಂದು ಈ ಕುರಿತು ಸಾವಂತ್ ವಿರುದ್ದ ಎಫ್‍ಐಆರ್ ಕೂಡ ದಾಖಲಾಗಿತ್ತು.

ಸ್ಥಳೀಯ ನ್ಯಾಯಾಲಯವು ಕೋರ್ಟ್‍ಗೆ ಹಾಜರಾಗುವಂತೆ ರಾಖಿ ಸಾವಂತ್ ಅವರಿಗೆ ಸೂಚಿಸಿತ್ತು. ಆದರೆ ಸಾವಂತ್ ಅವರು ಕೋರ್ಟ್‍ಗೆ ಹಾಜರಾಗದ ಕಾರಣ ಇಂದು ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದ ವಿಚಾರಣೆಯು ಏ.10ರಂದು ನಡೆಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin