ವಾಷಿಂಗ್ಟನ್‍ನಲ್ಲಿ ದರೋಡೆಕೋರರ ಗುಂಡಿಗೆ ಮತ್ತೊಬ್ಬ ಭಾರತೀಯ ಯುವಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Indian-Vikram

ವಾಷಿಂಗ್ಟನ್/ನವದೆಹಲಿ, ಏ.8-ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಕಗ್ಗೊಲೆ ಮತ್ತು ಹತ್ಯೆ ಯತ್ನ ಪ್ರಕರಣಗಳು ಮುಂದುವರೆದಿದ್ದು, ವಾಷಿಂಗ್ಟನ್‍ನಲ್ಲಿ ಇಬ್ಬರು ಶಸ್ತ್ರಸಜ್ಜಿತ ಮುಸುಕುಧಾರಿ ದರೋಡೆಕೋರರು ಗುಂಡು ಹಾರಿಸಿ 26 ವರ್ಷದ ಯುವಕನೊಬ್ಬನನ್ನು ಕೊಂದಿದ್ದಾರೆ. ಪಂಜಾನ್ ಜಿಲ್ಲೆಯ ಹೋಶಿಯಾರ್‍ಪುರ್‍ನ ವಿಕ್ರಮ್ ಜರ್‍ಯಾಲ್ ಹತ್ಯೆಯಾದ ನತದೃಷ್ಟ ಭಾರತೀಯ ಮೂಲದ ಯುವಕ. ಈ ಕೃತ್ಯದಿಂದಾಗಿ ಭಾರತೀಯ ಉದ್ಯೋಗಿಗಳು ಮತ್ತು ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಲ್ಲಿ ಮತ್ತೆ ಭೀತಿಯ ಕಾರ್ಮೋಡ ಆವರಿಸಿದೆ.

ಈ ಹತ್ಯೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಅಮೆರಿಕದ ತನಿಖಾ ಸಂಸ್ಥೆಗಳೊಂದಿಗೆ ಸರ್ಕಾರ ಸಂಪರ್ಕದಲ್ಲಿದ್ದು, ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.   ದುಷ್ಕರ್ಮಿಗಳಿಂದ ಗುಂಡೇಟಿಗೆ ಬಲಿಯಾದ ವಿಕ್ರಮ್ ಕುಟುಂಬದ ಸದಸ್ಯರಿಗೆ ಸ್ಯಾನ್‍ಫ್ರಾನ್ಸಿಸ್ಕೋದ ಭಾರತೀಯ ರಾಜತಾಂತ್ರಿಕ ಕಚೇರಿ ನೆರವಾಗುತ್ತಿದೆ ಎಂದು ಸುಷ್ಮಾ ಟ್ವೀಟರ್‍ನಲ್ಲಿ ಹೇಳಿದ್ದಾರೆ.   ಕಳೆದ 25 ದಿನಗಳ ಹಿಂದಷ್ಟೇ ವಿಕ್ರಮ್ ಅಮೆರಿಕಕ್ಕೆ ತೆರಳಿದ್ದರು. ಯಾಕಿಮಾ ಪಟ್ಟಣದ ಕುಟುಂಬದ ಸ್ನೇಹಿತರೊಬ್ಬರ ಎಎಂ-ಪಿಎಂ ಹೆಸರಿನ ಗ್ಯಾಸ್ ಸ್ಟೇಷನ್‍ನಲ್ಲಿ ಅವರು ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 6ರಂದು ಮಧ್ಯರಾತ್ರಿ ಇಬ್ಬರು ದುಷ್ಕರ್ಮಿಗಳು ಸ್ಟೇಷನ್‍ಗೆ ನುಗ್ಗಿ ಅವರ ಎದೆಗೆ ಗುಂಡು ಹಾರಿಸಿ ಪರಾರಿಯಾದರು ಎಂದು ಸಚಿವರು ತಿಳಿಸಿದ್ದಾರೆ.

ಈ ಕೃತ್ಯದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಲ್ಲಿನ ತನಿಖಾ ಸಂಸ್ಥೆಯನ್ನು ಕೋರಲಾಗಿದೆ. ವಿಕ್ರಮ್ ಕುಟುಂಬಕ್ಕೆ ಅಗತ್ಯವಾದ ಎಲ್ಲ ನೆರವನ್ನು ಸರ್ಕಾರ ನೀಡಲಿದೆ ಎಂದು ಸುಷ್ಮಾ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin