ವಾಷಿಂಗ್ಟನ್‍ನ ಮಾಲ್ ಒಂದರಲ್ಲಿ ಗುಂಡಿನ ದಾಳಿ, 4 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Firing

ಲಾಸ್ ಏಂಜೆಲಿಸ್, ಸೆ.24-ವಾಷಿಂಗ್ಟನ್‍ನ ಮಾಲ್ ಒಂದರಲ್ಲಿ ಇಂದು ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಹಂತಕ ನಾಪತ್ತೆಯಾಗಿದ್ದು, ಆತನ ಬೇಟೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಬುರ್ಲಿಂಗ್ಟನ್‍ನ ಕ್ಯಾಸ್ಕೆಡ್ ಮಾಲ್‍ನಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ  ಬಂದೂಕುದಾರಿಯಿಂದ ಈ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಕನಿಷ್ಟ ನಾಲ್ವರು ಹತರಾಗಿದ್ದು, ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ವಾಷಿಂಗ್ಟನ್ ಸ್ಟೇಟ್ ಪ್ಯಾಟ್ರೊಲ್ ಡಿಸ್ಟ್ರಿಕ್ 7 ವಕ್ತಾರ ಸಾರ್ಜೆಂಟ್ ಮಾರ್ಕ್ ಫ್ರಾನ್ಸಿಸ್ ಹೇಳಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಾಲ್‍ಗೆ ದೌಡಾಯಿಸಿ ಜನರನ್ನು ರಕ್ಷಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಹಂತಕ ಬಂದೂಕುದಾರಿಗಾಗಿ ಪೊಲೀಸರು ಬೇಟೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.  ಅಮೆರಿಕದ ಸಾರ್ವಜನಿಕ ಸ್ಥಳಗಳಲ್ಲಿ ಬಂದೂಕುದಾರಿಗಳ ದಾಳಿ ಮಾಡುತ್ತಿರುವ ಪ್ರಕರಣಗಳು ಮರುಕಳಿಸುತ್ತಿದ್ದು, ಜನರು ಆತಂಕಗೊಂಡಿದ್ದಾರೆ.

1524878_1280x720

Law enforcement officers work at the crime scene outside of Cascade Mall in Burlington, Wash., where several people were fatally shot on Friday, Sept. 23, 2016. Authorities in Washington State say several people have been killed during a shooting at the mall north of Seattle and that at least one suspect remains at large. Sgt. Mark Francis says authorities are searching for a man wearing gray who was last seen walking toward Interstate 5 from the mall.  (Dean Rutz/The Seattle Times via AP) ORG XMIT: WASET103

bulrington-mall-shooting-e1474687073314

► Follow us on –  Facebook / Twitter  / Google+

 

Facebook Comments

Sri Raghav

Admin