‘ವಾಸಿಸುವವನೇ ನೆಲದೊಡೆಯ’ ಮಸೂದೆ ರಾಷ್ಟ್ರಪತಿ ಅಂಗಳಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

CBSC-01

ಬೆಂಗಳೂರು, ಜೂ.3- ತಾಂಡ, ಹಟ್ಟಿ, ಹಾಡಿ ಮುಂತಾದೆಡೆ ವಾಸಿಸುತ್ತಿರುವ ಜನರಿಗೆ ನೆಲದ ಹಕ್ಕನ್ನು ನೀಡಲು ವಾಸಿಸುವವನೇ ನೆಲೆದೊಡೆಯ ಎಂಬ ಹಿನ್ನೆಲೆಯಲ್ಲಿ ಭೂ ಸುಧಾರಣೆ ಕಾಯ್ದೆ 2016ರನ್ನು ಜಾರಿಗೆ ತಂದ ಸರ್ಕಾರ ಅನುಮೋದನೆಗಾಗಿ ಕಳುಹಿಸಿದ್ದ ಪ್ರಸ್ತಾಪವನ್ನು ರಾಜ್ಯಪಾಲ ವಿ.ಆರ್.ವಾಲಾ ಅವರು ರಾಷ್ಟ್ರಪತಿ ಅವರಿಗೆ ರವಾನಿಸಿದ್ದಾರೆ.  ಐದಾರು ದಶಕಗಳಿಂದ ಹಟ್ಟಿ, ತಾಂಡ, ಹಾಡಿ ಮುಂತಾದ ಕಡೆ ವಾಸಿಸುತ್ತಿದ್ದ ಜನರಿಗೆ ನೆಲದ ಹಕ್ಕಿರಲಿಲ್ಲ. ಇದನ್ನು ಒದಗಿಸುವ ಹಿನ್ನೆಲೆಯಲ್ಲಿ ಭೂ ಸುಧಾರಣಾ ಮಸೂದೆ 2016ಕ್ಕೆ ತಿದ್ದುಪಡಿ ತಂದು ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಗಿತ್ತು. ಇದನ್ನು ರಾಜ್ಯಪಾಲರಿಗೆ ಕಳುಹಿಸಲು ಕೊಂಚ ವಿಳಂಬವಾಗಿತ್ತು.


ಹಲವು ಆಕ್ಷೇಪಗಳು ಕೂಡ ಕೇಳಿ ಬಂದಿದ್ದವು. ನಂತರ ಸರ್ಕಾರ ಮಸೂದೆಯನ್ನು ಅಂಗೀಕಾರಕ್ಕೆಂದು ರಾಜಭವನಕ್ಕೆ ಕಳುಹಿಸಿತ್ತು. ಈ ಮಸೂದೆಗೆ ರಾಜ್ಯಪಾಲರು ಅಂಗೀಕಾರ ನೀಡಿದ್ದರೆ ಆರೇಳು ದಶಕಗಳಿಂದ ವಂಚಿತರಾಗಿದ್ದ ಜನಕ್ಕೆ ನೆಲೆ ಸಿಗುತ್ತಿತ್ತು. ವಿಧಾನಸಭೆಯಲ್ಲೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಇದೇ ವಿಷಯ ಪ್ರಸ್ತಾಪಿಸಿದ್ದರು.

ಅಂದು ದೇವರಾಜ ಅರಸು ಅವರು ಉಳುವವನೇ ಭೂಮಿ ಒಡೆಯ ಎಂಬ ಕಾಯ್ದೆಯನ್ನು ಜಾರಿಗೆ ತಂದರು. ಈಗ ನಾವು ವಾಸಿಸುವವನೇ ನೆಲೆದೊಡೆಯ ಎಂಬ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದರು. ರಾಜ್ಯಪಾಲರ ಅಂಗಳದಲ್ಲಿದ್ದ ಈ ಮಸೂದೆ ರಾಷ್ಟ್ರಪತಿಯ ಅಂಗಳಕ್ಕೆ ರವಾನೆಯಾಗಿದೆ. ಕಾಯ್ದೆಯನ್ನು ಶೀಘ್ರ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿ ಹೋರಾಟ ಮಾಡಿದ ಕೆ.ಶಿವಮೂರ್ತಿ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಈ ಮಸೂದೆಯನ್ನು ಅಂಗೀಕಾರ ಮಾಡಿಸಿಕೊಡುವಂತೆ ರಾಷ್ಟ್ರಪತಿಗಳ ಮೇಲೆ ಒತ್ತಡ ತರಬೇಕೆಂದು ಮನವಿ ಮಾಡಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin