ವಾಹನ ಕಳ್ಳರನ್ನು ಬಗ್ಗುಬಡಿಯಲು ಹೊಸ ಪ್ಲಾನ್..!

ಈ ಸುದ್ದಿಯನ್ನು ಶೇರ್ ಮಾಡಿ

Number-Plate--03

ಬೆಂಗಳೂರು,ಅ.16- ಇಷ್ಟು ದಿನ ಡಿಸೈನ್ ಡಿಸೈನ್ ಆಗಿ ನಂಬರ್ ಪ್ಲೇಟ್ ಹಾಕಿಸುತ್ತಿದ್ದ ಸ್ಟೈಲ್ ಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿಯೇ ಹೊಸ ಪ್ರಯೋಗ ಮಾಡಲು ರಾಜ್ಯದ ಸಾರಿಗೆ ಇಲಾಖೆ ಮುಂದಾಗಿದೆ. ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಹೊಸ ಯೋಜನೆಗೆ ಎಚ್.ಎಂ.ರೇವಣ್ಣ ಸಿದ್ಧರಾಗಿದ್ದಾರೆ. ರಾಜ್ಯದಲ್ಲಿರೋ ಸರಿ ಸುಮಾರು 66 ಲಕ್ಷ ವಾಹನಗಳಿಗೆ ಹೊಸ ನಂಬರ್ ಪ್ಲೇಟ್‍ಗಳನ್ನು ಹಾಕಿಸಲು ಪ್ಲಾನ್ ಮಾಡಿದ್ದು, ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಪ್ರಸ್ತುತ ಒಂದು ವಾಹನದ ನಂಬರ್ ಪ್ಲೇಟಿನ ಬೆಲೆ 1 ಸಾವಿರ ಇದೆ. ಆದರೆ ಹೊಸ ನಂಬರ್ ಪ್ಲೇಟ್‍ಗಳ ಅಳವಡಿಕೆಗೆ ಸರ್ಕಾರ ಮುಂದಾದರೆ ಮಾಲೀಕರ ಜೇಬಿಗೆ 2200 ರೂ. ಕತ್ತರಿ ಬೀಳಲಿದೆ ಎಂದು ಹೇಳಲಾಗಿದೆ.

ಇನ್ನು ಈ ರೀತಿಯ ನಂಬರ್‍ಪ್ಲೇಟ್ ಜಾರಿಗೆ ತರುತ್ತಿರೋ ಮೊದಲ ರಾಜ್ಯ ಕರ್ನಾಟಕವಾಗಿದೆ. ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಇದಾಗಲಿದ್ದು, ಇನ್ನು ಮುಂದೆ ವಾಹನ ಕಳ್ಳರಿಗೆ ಮತ್ತು ಬೇರೆ ರೀತಿಯ ಅಕ್ರಮ ವ್ಯವಹಾರ ಮಾಡುವವರು ಸುಲಭವಾಗಿ ಸಿಕ್ಕಿಹಾಕಿಕೊಳ್ಳೋದಂತು ಗ್ಯಾರಂಟಿ. ಹಳೆಯ ಐಎನ್‍ಡಿ ಪ್ಲೇಟï ಬದಲಾಗಿ ಇದು ಹೊಸ ವಿನ್ಯಾಸವುಳ್ಳ ಪ್ಲೇಟ್ ಇದಾಗಲಿದ್ದು, ಇದು ದೇಶದಲ್ಲಿಯೇ ಮೊದಲು ಎನ್ನಲಾಗಿದೆ.

ಅನುಕೂಲಗಳು:
ನಂಬರ್, ಗಾತ್ರದಲ್ಲಿ ದೊಡ್ಡದಾಗಿ ಕಾಣಲಿದೆ, ಕತ್ತಲಲ್ಲಿಯೂ ಸುಲಭವಾಗಿ ಓಡಾಡುವಂತೆ ರೇಡಿಯಂ ಬಣ್ಣ , ಸ್ವಂತ ವಾಹನಗಳಿಗೆ, ಬಾಡಿಗೆ ವಾಹನಗಳಿಗೆ ಹಾಗೂ ಬಸ್‍ಗಳಿಗೆ ಪ್ರತ್ಯೇಕ ಇಂಗ್ಲೀಷ್ ಅಕ್ಷರ, 45 ಡಿಗ್ರಿ ಕೋನದಲ್ಲಿಯೂ ಓದುವಂತೆ ಅಕ್ಷರ ವಿನ್ಯಾಸ, ಕ್ರೋಮಿಯಂ ಹಾಲೋಗ್ರಾಮ್ ಲೇಸರ್ ನಂಬರ್ ಪ್ಲೇಟ್ ಇದಾಗಿದೆ.

Facebook Comments

Sri Raghav

Admin