ವಿಂಡೀಸ್‍ಗೆ ಅಂತಿಮ ದಿನವೂ ವರವಾಗುವನೇ ವರುಣ

ಈ ಸುದ್ದಿಯನ್ನು ಶೇರ್ ಮಾಡಿ

dgsgsdgsdgಜಮೈಕಾ,  ಆ.3- ಭಾರತ ಹಾಗೂ ವೆಸ್ಟ್‍ಇಂಡೀಸ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯವು ಕುತೂಹಲ ಘಟ್ಟ ತಲುಪಿದೆ.ಅಂತಿಮ ದಿನವಾದ ಇಂದು ವೆಸ್ಟ್‍ಇಂಡೀಸ್‍ನ ಉಳಿದ 6  ವಿಕೆಟ್‍ಗಳನ್ನು  ಕಬಳಿಸುವ ಮೂಲಕ ಭಾರತ ಮತ್ತೊಂದು ಸರಣಿ ಯನ್ನು ಗೆಲ್ಲುವ  ತವಕದಲ್ಲಿದ್ದರೆ, ಇಂದಿನ ಸಂಪೂರ್ಣ ಪಂದ್ಯವು ಮಳೆರಾಯನ ಕೃಪೆಯಿಂದ ಡ್ರಾ ಮಾಡಿಕೊಳ್ಳುವ  ಲೆಕ್ಕಾಚಾರ ದಲ್ಲಿ ವೆಸ್ಟ್‍ಇಂಡೀಸ್‍ನ ನಾಯಕ ಜಸ್ಟಿನ್ ಹೋಲ್ಡರ್ ಇದ್ದಾರೆ.

4ನೆ ದಿನವೂ ವರುಣನ ಕಾಟ:

ಎರಡನೇ ಟೆಸ್ಟ್‍ನ ಮೂರನೆ  ದಿನದ ಆಟದ ವೇಳೆ  ಮಳೆ ಸುರಿದಿದ್ದರಿಂದ  ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 500/9 ಡಿಕ್ಲೇರ್ಡ್ ಘೋಷಿಸಿದರು.ನಾಲ್ಕನೇ ದಿನದ ಆಟದಲ್ಲಿ ವೆಸ್ಟ್‍ಇಂಡೀಸ್ ಅನ್ನು ಸರ್ವಪತನ ಮಾಡುವ  ಮೂಲಕ ಗೆಲ್ಲುವ ಉತ್ಸಾಹದಲ್ಲಿದ್ದ ಭಾರತದ ಆಟಗಾರರಿಗೆ ನಿರಾಸೆ ಮೂಡಿದರು.4ನೆ ದಿನದಲ್ಲಿ ಕೇವಲ 15.5 ಓವರ್‍ಗಳನ್ನು ಎಸೆದ ಭಾರತದ ವೇಗಿಗಳು ವೆಸ್ಟ್‍ಇಂಡೀಸ್‍ನ ಮೊತ್ತ 48 ರನ್‍ಗಳಾಗುವುದರಲ್ಲೇ ಪ್ರಮುಖ 4 ವಿಕೆಟ್‍ಗಳನ್ನು ಕೆಡವು ಗೆಲ್ಲುವ ಹೊಸ್ತಿನಲ್ಲಿದ್ದ ಭಾರತದ ಆಸೆಗೆ ವರುಣ ತಣ್ಣೀರೆರಚಿದರು.ಈಗ ಉಳಿದ ಒಂದು ದಿನದ ಆಟದಲ್ಲಿ  ಮಳೆಯೇ ನಿರ್ಣಾಯವಾಗಿದ್ದು  ಪಂದ್ಯವು ಯಾರ ಪರ ವಾಲಲಿದೆ ಎಂಬ ಕುತೂಹಲ ಮೂಡಿಸಿದೆ.

 

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin