ವಿಂಡೀಸ್ ವಿರುದ್ಧ ಪುಟಿದೆದ್ದ ಟೀಮ್ ಇಂಡಿಯಾ

ಈ ಸುದ್ದಿಯನ್ನು ಶೇರ್ ಮಾಡಿ

Aswin

ಸೇಂಟ್ ಲೂಸಿಯಾ, ಆ.10-ಆರಂಭ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳ ವೈಫಲ್ಯದಿಂದ ಸಂಕಷ್ಟಕ್ಕೆ ಒಳಗಾಗಿ ಈಗ ಪುಟಿದೆದ್ದ ಭಾರತ  ವೆಸ್ಟ್‍ಇಂಡೀಸ್ ವಿರುದ್ಧ  ನಡೆಯುತ್ತಿರುವ ಮೂರನೆ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಅಂತ್ಯಕ್ಕೆ ಗೌರವ ಮೊತ್ತ ದಾಖಲಿಸಿದೆ.  ಇಲ್ಲಿನ ಡರೇನ್ ಸಾಮಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಕೊಹ್ಲಿ ಬಳಗ ಆರಂಭದಲ್ಲೇ ಆಘಾತ ಅನುಭವಿಸಿದೆ.  ಆರಂಭಿಕವಾಗಿ ಕಣಕ್ಕಿಳಿದಿದ್ದ ಶಿಖರ್‍ಧವನ್ ಹಾಗೂ ಕೆ.ದಿಲ್ ರಾಹುಲ್ ಜೋಡಿಯು ವೆಸ್ಟ್ ಇಂಡೀಸ್ ಬೌಲರ್‍ಗಳನ್ನು ಎದುರಿಸಲು ವಿಫಲರಾದರು.  ತಂಡದ ಮೊತ್ತ 9 ರನ್ ಇದ್ದಾಗ ಈ ಜೋಡಿಯು ಬೇರ್ಪಟಿತ್ತು. 1 ರನ್ ಗಳಿಸಿದ್ದ ಶಿಖರ್‍ಧವನ್ ಗ್ಯಾಬ್ರೀಲ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಮೊದಲ ಟೆಸ್ಟ್ ಪಂದ್ಯದಲ್ಲೇ ಅಮೋಘ ದ್ವಿಶತಕ ಸಿಡಿಸಿದ ನಾಯಕ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಔಟಾದರು.

19 ರನ್‍ಗೆ ಎರಡು ಅಮೂಲ್ಯ ಕಳೆದುಕೊಂಡು ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ರಾಹುಲ್ ಅರ್ಧಶತಕ: ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ಅಜಿಂಕ್ಯಾ ರಹಾನೆ ಆಸರೆಯಾದರು. ವೆಸ್ಟ್ ಇಂಡೀಸ್ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸಿದ ರಾಹುಲ್ ಈ ಟೆಸ್ಟ್‍ನಲ್ಲಿ ಅರ್ಧ ಶತಕ ಪೂರೈಸಿದರು. ಎಚ್ಚರಿಕೆಯಿಂದ ಆಟವಾಡಿದ ರಾಹುಲ್(50 ರನ್, 65ಎಸೆತ, 6 ಬೌಂಡರಿ) ಅರ್ಧ ಶತಕ ಬಾರಿಸಿದರು.  ರಹಾನೆ (35ರನ್, 135 ಎಸೆತ, 4 ಬೌಂಡರಿ) ಅವರ ಉಪಯುಕ್ತ ಆಟದಿಂದ ಭಾರತಕ್ಕೆ ಉತ್ತಮ ಕಾಣಿಕೆ ನೀಡಿ ಅಪಾಯದಿಂದ ಪಾರು ಮಾಡಿದರು.  ತಂಡದ ಮೊತ್ತ 77 ರನ್‍ಗಳಿದ್ದಾಗ ರಾಹುಲ್ ರೋಸ್ಟನ್ ಚೇಸ್ ಬೌಲಿಂಗ್‍ನಲ್ಲಿ ಬ್ರಾಧಲೇಟ್‍ಗೆ ಕ್ಯಾಚ್ ನೀಡಿ ಔಟಾದರು.

ರೋಹಿತ್ ವೈಫಲ್ಯ:

77 ರನ್‍ಗೆ 3 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ಭಾರತಕ್ಕೆ ರೋಹಿತ್ ಶರ್ಮಾ ಜವಾಬ್ದಾರಯಿಂದ ಆಟವಾಡುವಲ್ಲಿ ವಿಫಲರಾದರು. ನೂರರ ಗಡಿ ದಾಟುವಷ್ಟರಲ್ಲೇ ರೋಹಿತ್ ಔಟಾದರು. 35 ರನ್ ಗಳಿಸಿದ್ದ ರಹಾನೆ ಚೇಸ್ ಬೌಲಿಂಗ್‍ನಲ್ಲಿ ಬೋಲ್ಡ್ ಆದರು.

ಆಸರೆಯಾದ  ಅಶ್ವಿನಿ- ಸಹಾ ಜೋಡಿ
ತಂಡದ ಮೊತ್ತ 126ರನ್‍ಗೆ ಅಗ್ರ ಐವರು ಬ್ಯಾಟ್ಸ್‍ಮನ್‍ಗಳ ವಿಕೆಟ್ ಕಳೆದುಕೊಂಡ ಭಾರತ, ಕಡಿಮೆ ಮೊತ್ತಕ್ಕೆ ಆಲ್ ಔಟ್ ಆಗುವ ಭೀತಿಯಲ್ಲಿತ್ತು. ಆದರೆ ತಂಡಕ್ಕೆ ಆಸರೆಯಾಗಿದ್ದು, ರವಿಚಂದ್ರನ್ ಅಶ್ವಿನಿ ಹಾಗೂ ವೃದ್ಧಿಮಾನ್ ಸಹಾ ಜೋಡಿ ನಿಧಾನವಾಗಿ ಆಟವಾಡಿದ್ದ ಈ ಜೋಡಿಯೂ ವಿಂಡೀಸ್ ಬೌಲರ್‍ಗಳನ್ನು ಕಾಡಿದರು. ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಅಶ್ವಿನ್ 190 ಎಸೆತ ಎದುರಿಸಿ 2 ಬೌಂಡರಿ ಸಹಿತ ಆಜೇಯ 75ರನ್ ಗಳಿಸಿದ್ದಾರೆ. ಅಶ್ವಿನ್‍ಗೆ ಸಾಥ್ ನೀಡಿದ ವೃದ್ಧಿಮಾನ್ ಸಹಾ ಆಜೇಯ 46 ರನ್ ಗಳಿಸಿದ್ದಾರೆ. ಈ ಜೋಡಿಯು ಎರಡನೆ ದಿನದ ಆಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇನ್, ಜೋಸೆಫ್ ತಲಾ 2 ವಿಕೆಟ್ ಕಬಳಿಸಿದರು ಹಾಗೂ ಗ್ರಾಬೀಲ್ 1 ವಿಕೆಟ್ ಪಡೆದರು.

► Follow us on –  Facebook / Twitter  / Google+

 

Facebook Comments

Sri Raghav

Admin