ವಿಕಲಚೇತನ ಮಕ್ಕಳ ಶಿಕ್ಷಣಕ್ಕೆ ಒತ್ತು

ಈ ಸುದ್ದಿಯನ್ನು ಶೇರ್ ಮಾಡಿ

beluru-4

ಬೇಲೂರು, ಆ.17- ಸರ್ಕಾರ ವಿಕಲಚೇತನ ಮಕ್ಕಳ ವಿಶೇಷ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ನೀಡುತ್ತಿರುವ ಆನೇಕ ಸವಲತ್ತುಗಳ ಉಪಯೋಗವನ್ನು ವಿಕಲಚೇತನ ಮಕ್ಕಳ ಪೋಷಕರು ಪಡೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಂದರೇಶ್ ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆ, ವಿಕಲಚೇತನ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ವೈದ್ಯಕಿಂ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲ ಮಕ್ಕಳು ಅಪ್ರತಿವi ಪ್ರತಿಭೆ ಹೊಂದಿರುತ್ತಾರೆ. ಅವರಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸಿದಾಗ ಅವರು ಸಹ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ.
ವಿಕಲಚೇತನ ಮಕ್ಕಳಿಗೆ ಯಾವುದೆ ತಾರತಮ್ಯ ಮಾಡದೆ ಎಲ್ಲ ಮಕ್ಕಳಂತೆ ಅವಕಾಶಗಳನ್ನು ನೀಡಿಪೋತ್ಸಾಹಿಸಬೇಕಿದೆ. ತಾಲೂಕಿನಲ್ಲಿ ಒಟ್ಟು 252 ಅಂಗವಿಕಲ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದು, ಸರ್ಕಾರ ಉತ್ತಮವಾಗಿರುವ ಮಕ್ಕಳ ಜೊತೆಯಲ್ಲಿ ಇವರಿಗೂ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಿರುವುದಲ್ಲದೆ ಆರೋಗ್ಯ ತಪಾಸಣೆ ಮತ್ತು ಸಾಧನ ಸಲಕರಣೆಯನ್ನು ಸಹ ನೀಡಲು ಮುಂದಾಗಿದೆ ಎಂದು ತಿಳಿಸಿದರು.ಸರ್ವಶಿಕ್ಷಣ ಅಭಿಯಾನದ ಸಹಾಯಕ ಸಮನ್ವಯಾಧಿಕಾರಿ ಸುಮಾ ಮಾತನಾಡಿ, ಪ್ರತಿ ವರ್ಷ ಅಂಗವಿಕಲ ಮಕ್ಕಳ ತಪಾಸಣೆ ಮತ್ತು ಶಸ್ತ್ರ ಚಿಕ್ಕಿತ್ಸೆಯನ್ನು ಮಾಡುವ ಮೂಲಕ ವಿಕಲಚೇತನರಲ್ಲಿ ಅತ್ಮ ವಿಶ್ವಾಸ ಮೂಡಿಸುತ್ತಿದೆ ಎಂದರು.ಸಮಾಯಾನ್ವಧಿಕಾರಿ ದೇವರಾಜ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಸುಧಾ, ಡಾ.ರಘು, ಸ್ಕಂದ ಫೌಂಡೇಶನ್‍ನ ಡಾ.ಲೋಕೇಶ್‍ನಾಯ್ಕ್ , ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷೆ ತೀರ್ಥವತಿ, ನಿರ್ದೇಶಕಿ ಸವಿತಾ ಇನ್ನಿತರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin