ವಿಕಾಸ್‍ಗೆ ಸೋಲು : ಬಾಕ್ಸರ್‍ಗಳು ಬರಿಗೈಯಲ್ಲಿ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

vIKAS

ರಿಯೋ ಡಿ ಜನೈರೋ, ಆ.16- ಭಾರತಕ್ಕೆ ಪದಕವೊಂದರ ಆಸೆಯನ್ನು ಜೀವಂತವಾಗಿರಿಸಿದ ಭರವಸೆಯ ಬಾಕ್ಸರ್ ವಿಕಾಸ್ ಕೃಷ್ಣನ್ ಪರಾಭವಗೊಂಡಿದ್ದು, ಇದರೊಂದಿಗೆ ಬಾಕ್ಸರ್‍ಗಳು ಎಂಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಲಂಪಿಕ್ಸ್‍ನಲ್ಲಿ ಪದಕ ರಹಿತವಾಗಿ ಬರಿಗೈನಲ್ಲಿ ಹಿಂದಿರುಗುವಂತಾಗಿದೆ. ರಿಯೋ ಡಿ ಜನೈರೋದಲ್ಲಿ ನಿನ್ನೆ ತಡ ರಾತ್ರಿ ನಡೆದ 75 ಕೆಜಿ ಬಾಕ್ಸಿಂಗ್ ಕ್ವಾರ್ಟರ್ ಫೈನಲ್‍ನಲ್ಲಿ ಏಷ್ಯನ್ ಗೇಮ್ಸ್‍ನ ಚಿನ್ನದ ಪದಕ ವಿಜೇತ ವಿಕಾಸ್ ಕೃಷ್ಣನ್ ಉಜ್ಬೇಕಿಸ್ತಾನದ ಬೆಕ್ಟೆಮಿರ್ ಮೆಲಿಕುಜೀವ್ ಅವರಿಗೆ ಶರಣಾದರು.  ಈಗಾಗಲೇ ಶಿವ ಥಾಪ (56 ಕೆಜಿ) ಮತ್ತು ಮನೋಜ್‍ಕುಮಾರ್ (64 ಕೆಜಿ) ಸ್ಪರ್ಧೆಯಿಂದ ನಿರ್ಗಮಿಸಿದ್ದು, ವಿಕಾಸ್ ಸೋಲು ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸಿಂಗ್ ಸವಾಲಿಗೆ ಅಂತಿಮ ತೆರೆ ಎಳೆದಿದೆ.  ಒಲಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ಖುಷಿಯಿಂದ ಹಿಂದಿರುಗುತ್ತಿದ್ದ ಭಾರತೀಯ ಬಾಕ್ಸರ್‍ಗಳಿಗೆ ರಿಯೋದಲ್ಲಿ ಭಾರೀ ಹಿನ್ನಡೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin