ವಿಕ್ಟರಿ ಭಾಷಣ ಮಾಡಿದ ಮೋದಿ, ನವ ಭಾರತದ ಕನಸು ಬಿತ್ತಿದ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Speech

ನವದೆಹಲಿ. ಮಾ.12 : ಪಂಚರಾಜ್ಯಗಳ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ನಂತರ ಮೊದಲ ಭಾರಿಗೆ ಪ್ರಧಾನಿ ಮೋದಿ ಭಾಷಣ ಮಾಡಿದ್ದು 125 ಕೋಟಿ ಭಾರತೀಯರಲ್ಲಿ ಹೊಸ ಭಾರತದ ಕನಸನ್ನು ಬಿತ್ತಿದ್ದಾರೆ.

ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ದೆಹಲಿಯ ಅಶೋಕ ರಸ್ತೆಯಲ್ಲಿ ಬಿಜೆಪಿ ಪ್ರಧಾನ ಕಚೇರಿವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯೋತ್ಸವ ಯಾತ್ರೆ ನಡೆಸಿದರು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಪಂಚರಾಜ್ಯಗಳ ಫಲಿತಾಂಶವು ಹೊಸ ಭಾರತದ ಭದ್ರ ಬುನಾದಿ, ಮಧ್ಯಮವರ್ಗದ ಜನರ ಆಕಾಂಕ್ಷೆ ಮತ್ತು ಬಡವರ ಪ್ರತಿಭೆಯನ್ನು ಬಳಸಿದರೆ ನಮ್ಮ ದೇಶ ಉತ್ತುಂಗಕ್ಕೆ ತಲುಪಬಹುದು, 125 ಕೋಟಿ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ನವ ಭಾರತದ ಕನಸು ನನಸು ಮಾಡುತ್ತೇವೆ ಎಂದರು.

ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಬೆಂಬಲ ಹೆಚ್ಚುತ್ತಾ ಬಂದಿದೆ. ಈ ಯಶಸ್ಸಿನ ಹಿಂದೆ ಕಾರ್ಯಕರ್ತರ ಪಾಲು ಇದೆ. ಈ ಚುನಾವಣೆಯ ಗೆಲುವಿಗೆ ಕಾರಣರಾದ ಎಲ್ಲಾ ನಾಯಕರಿಗೂ ಹಾಗೂ ಜನರಿಗೆ ಧನ್ಯವಾದ ತಿಳಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡಿ ಗೆಲುವಿಗೆ ಕಾರಣರಾದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಕರ್ತರನ್ನು ಶ್ಲಾಘಿಸಿದ ಮೋದಿ, ಸದಸ್ಯತ್ವ ಅಭಿಯಾನದ ಮೂಲಕ ಬಿಜೆಪಿ ಬೃಹತ್ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ಪ್ರಧಾನಿ ಹಿಂದೆ ಹೇಳಿದ್ದ ತಮ್ಮ ಮಾತುಗಳಲ್ಲೂ ಪುನರಾವರ್ತಿಸಿ , ನಮ್ಮಿಂದ ತಪ್ಪುಗಳಾವುದುದು ಸಹಜ ಆದರೆ ಉದ್ದೇಶ ಪೂರ್ವಕವಾಗಿ ಎಂದೂ ತಪ್ಪು ಮಾಡುವುದಿಲ್ಲ, ನಾವು ಪರಿಶ್ರಮದ ಪರಾಕಾಶೆಯನ್ನು ತಲುಪಿ ದೇಶಸೇವೆ ಮಾಡುತ್ತೇವೆ. ಪ್ರತಿಯೊಂದೂ ಕಾರ್ಯವನ್ನೂ ಪ್ರಾಮಾಣಿಕತೆಯಿಂದ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಉತ್ತರ ಪ್ರದೇಶದಲ್ಲಿ ಆಯ್ಕೆಯಾದ ಶಾಸಕರ ಮುಖಗಳನ್ನು ಎಷೋ ಜನರು ನೋಡಿಯೇ ಇಲ್ಲ, ಮಾದ್ಯಮಗಳಲ್ಲಾಗಲಿ, ಪತ್ರಿಕೆಗಳಲ್ಲಾಗಲಿ ಅವರ ಮುಖಪರಿಯವೂ ಇಲ್ಲದೆ ಮತ ಹಾಕಿ ಗೆಲ್ಲಿಸಿದ್ದೀರಿ, ನಮ್ಮ ಪಕ್ಷದ ಮೇಲಿನ ಈ ನಿಮ್ಮ ನಂಬಿಕೆಯನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದರು.
ಬಿಜೆಪಿ ಪ್ರಪಂಚದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ನಾವು ಈ ಪಕ್ಷದ ಸದಸ್ಯರಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Andr

 

Facebook Comments

Sri Raghav

Admin