ವಿಘ್ನ ನಿವಾರಕನ ವಿಸರ್ಜಿಸಲು ಹೋಗಿ 12 ಮಂದಿ ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

Shivamogga

ಶಿವಮೊಗ್ಗ, ಸೆ.8- ಶಿವಮೊಗ್ಗದಲ್ಲಿ ವಿಘ್ನ ನಿವಾರಕನ ವಿಸರ್ಜನೆ ವೇಳೆಯೇ ನಿನ್ನೆ ದೊಡ್ಡ ದುರಂತ ಸಂಭವಿಸಿದೆ. ಗಣಪತಿ ವಿಸರ್ಜಿಸಲು ಹೋಗಿ 12 ಮಂದಿ ಜಲಸಮಾಧಿಯಾಗಿದ್ದು, 8 ಜನರ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರ ಮೃತದೇಹಕ್ಕೆ ಹುಡುಕಾಟ ನಡೆದಿದೆ.ಶಿವಮೊಗ್ಗ-ಹೊನ್ನಾಳಿ ಮಾರ್ಗದಲ್ಲಿರುವ ಹಾಡೋನಹಳ್ಳಿ ಗ್ರಾಮದಲ್ಲಿ ಈ ದುರಂತ ನಡೆದಿದೆ. 5 ಜನರ ಸಾಮಥ್ರ್ಯವಿರುವ ತೆಪ್ಪದಲ್ಲಿ 25ಕ್ಕೂ ಹೆಚ್ಚು ಜನರಿದ್ದ ಹಿನ್ನಲೆಯಲ್ಲಿ ನದಿಯ ಮಧ್ಯಭಾಗದಲ್ಲಿ ತೆಪ್ಪ ಮುಳುಗಿದೆ. ವೀರಭದ್ರಪ್ಪ, ಶಿವಕುಮಾರ್, ವೀರೇಶ್, ಜೀವನ್ , ರಮೇಶ್ , ಎಂ.ಹೆಚ್. ಗಣೇಶ, ಮಂಜು, ಚಂದ್ರಪ್ಪ , ಶವ ಪತ್ತೆಯಾಗಿದ್ದು, ಉಳಿದವರ ಶವ ಪತ್ತೆಯಾಗಬೇಕಾಗಿದೆ.ಇನ್ನು ಬೆಳಗ್ಗೆಯಿಂದಲೇ ರಬ್ಬರ್ ಬೋಟ್ ಮೂಲಕ ಕಾರ್ಯಾಚರಣೆ ಮುಂದುವರೆಯುತ್ತಿದೆ. ತಮ್ಮವರನ್ನು ಕಳೆದುಕೊಂಡು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಗಣೇಶನ ಹಬ್ಬದ ಸಂಭ್ರಮದಲ್ಲಿರಬೇಕಾದ ಗ್ರಾಮದಲ್ಲಿ ಇದೀಗ ನಿರವ ಮೌನ ಆವರಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin