ವಿಚಾರಣಾಧೀನ ಕೈದಿ ಎಸ್ಕೇಪ್ ಆಗಲು ನೆರವು ನೀಡಿದ್ದ ಕಿಲಾಡಿ ಕಳ್ಳ ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

Prison-Jail-Breake

ಚಿತ್ರದುರ್ಗ,ಫೆ.26- ಉಪಕಾರಾಗೃಹದಲ್ಲಿ ಬಂಧಿಯಾಗಿದ್ದ ವಿಚಾರಣಾಧೀನ ಕೈದಿ ಪರಾರಿಯಾಗಲು ನೆರವಿಗೆ ಬಂದಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಅಪರೂಪದ ಘಟನೆ ಇಲ್ಲಿ ವರದಿಯಾಗಿದೆ. ಚಿತ್ರದುರ್ಗ ಹೊರವಲಯದಲ್ಲಿರುವ ಉಪ ಕಾರಾಗೃಹದ ಹಿಂಭಾಗದ ಗೋಡೆಗೆ ಏಣಿ ಹಾಕಿ ಒಳಗೆ ಬಂದ ಮಂಜುನಾಥ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಘಟನೆ ವಿವರ:

ಗ್ಯಾಸ್ ಸಿಲಿಂಡರ್‍ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಚಿತ್ರದುರ್ಗ ನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈತ ನ್ಯಾಯಾಂಗ ಬಂಧನದಲ್ಲಿದ್ದ. ಕಳೆದ ಎರಡು ದಿನಗಳ ಹಿಂದೆ ಜಾಮೀನು ಪಡೆದು ಕಾರಾಗೃಹದಿಂದ ಹೊರಬಂದಿದ್ದ. ಈ ವೇಳೆ ಅಲ್ಲಿ ತನ್ನ ಜೊತೆಯಲ್ಲಿದ್ದ ಮತ್ತೊಬ್ಬ ವಿಚಾರಣಾಧೀನ ಕೈದಿ ರಫೀಕ್ ಎಂಬುವನ ಜೊತೆ ಸಲುಗೆ ಬೆಳೆಸಿಕೊಂಡಿದ್ದ.
ಹಾಗಾಗಿ ರಫೀಕ್‍ನನ್ನು ಕಾರಾಗೃಹದಿಂದ ಪರಾರಿಯಾಗಲು ಮಂಜುನಾಥ್‍ನ ನೆರವು ಕೇಳಿದ್ದ ಅದಕ್ಕೆ ಆತ ಒಪ್ಪಿಗೆ ಸೂಚಿಸಿದ್ದ ಎನ್ನಲಾಗಿದೆ.

ನಿನ್ನೆ ಸಂಜೆ ಏಣಿ ಸಹಾಯದಿಂದ ಕಾರಾಗೃಹದ ಗೋಡೆ ಹಾರಿ ಒಳಗೆ ಹೋದ ಮಂಜುನಾಥ್ ಸಮಯ ಸಾಧಿಸಿ ರಫೀಕ್‍ನನ್ನು ಹೊರಗೆ ಜಿಗಿಸಲು ಬಹುತೇಕ ಯಶಸ್ವಿಯಾಗಿದ್ದ. ಆದರೆ ಪಹರೆಯಲ್ಲಿದ್ದ ಜೈಲಿನ ಕೆಲ ಸಿಬ್ಬಂದಿಗಳು ಏಣಿ ನೋಡಿ ನಂತರ ಸೈರನ್ ಮೊಳಗಿಸಿದ್ದಾರೆ. ಕೈದಿ ರಫೀಕ್ ಓಡುತ್ತಿರುವುದನ್ನು ನೋಡಿ ಆತನನ್ನು ಬೆನ್ನಟ್ಟಿ ಹಿಡಿಯಲಾಗಿದೆ. ಜತೆಗೆ ಮಂಜುನಾಥ್ ಸಹ ಸಿಕ್ಕಿ ಬಿದ್ದಿದ್ದಾನೆ. ಜಾಮೀನು ಮೇಲೆ ಬಿಡುಗಡೆಯಾಗಿದ್ದ ಮಂಜುನಾಥ್ ಈಗ ಮತ್ತೆ ಜೈಲು ಸೇರುವಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin