ವಿಚಾರಣೆಗೆ ಹಾಜರಾಗಲು ನ್ಯಾ.ಭಾಸ್ಕರ್ ರಾವ್ ಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Bhaskar-roa

ಬೆಂಗಳೂರು, ಆ.30- ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಲೋಕಾಯುಕ್ತ ಭಾಸ್ಕರ್ರಾವ್ ಅವರ ವಿಚಾರಣಾ ಹಾಜರಾತಿಗೆ ಕೋರ್ಟ್ ಕೆಲಕಾಲ ವಿನಾಯಿತಿ ನೀಡಿದ್ದು, ಸೆ.23ಕ್ಕೆ ಹಾಜರಾಗಬೇಕೆಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಲೋಕಾಯುಕ್ತದಲ್ಲಿನ ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳನೆ ಆರೋಪಿಯಾಗಿರುವ ನಿವೃತ್ತ ಲೋಕಾಯುಕ್ತ ಭಾಸ್ಕರ್ರಾವ್ ಅವರ ವಿರುದ್ಧ ಎಸ್ಐಟಿ ಚಾರ್ಜ್ಶೀಟ್ ಸಲ್ಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಆದರೆ, ಭಾಸ್ಕರ್ರಾವ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಭಾಸ್ಕರ್ರಾವ್ ಅವರ ಪರ ವಕೀಲರು ಅನಾರೋಗ್ಯದ ಕಾರಣ ಭಾಸ್ಕರ್ರಾವ್ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಜರಾತಿ ವಿನಾಯಿತಿ ನೀಡುವಂತೆ ಮನವಿ ಮಾಡಿದರು.
ಈ ಮನವಿ ಪುರಸ್ಕರಿಸಿದ ನ್ಯಾಯಾಲಯ ಸೆ.23ಕ್ಕೆ ಹಾಜರಾಗುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.  ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಸ್ವತಃ ಲೋಕಾಯುಕ್ತರಾಗಿದ್ದ ಭಾಸ್ಕರ್ರಾವ್ ಅವರ ಪುತ್ರ ಅಶ್ವಿನ್ರಾವ್ ಅವರು ಇದರಲ್ಲಿ ಆರೋಪಿಗಳಾಗಿದ್ದರು.

ಪ್ರಕರಣವನ್ನು ರಾಜ್ಯಸರ್ಕಾರ ಎಸ್ಐಟಿಗೆ ವಹಿಸಿತ್ತು. ಭಾಸ್ಕರ್ರಾವ್ ಅವರನ್ನು ಉಭಯ ಸದನಗಳಲ್ಲಿ ನಿರ್ಣಯ ಮಂಡಿಸಿ ಸರ್ಕಾರ ವಜಾ ಮಾಡಿತ್ತು.ನಂತರ ಅವರ ವಿರುದ್ಧ ಎಸ್ಐಟಿ ತನಿಖೆ ಆರಂಭಿಸಿ ಸಮನ್ಸ್ ನೀಡಿತ್ತು. ಇನ್ನೂ ಅವರು ವಿಚಾರಣೆಗೆ ಹಾಜರಾಗಿಲ್ಲ. ಸೆ.23ರಂದು ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ.

Facebook Comments

Sri Raghav

Admin