ವಿಚಾರಣೆಗೆ ಹಾಜರಾಗಲು ಭೀಮಾನಾಯ್ಕಗೆ ನೋಟೀಸ್

ಈ ಸುದ್ದಿಯನ್ನು ಶೇರ್ ಮಾಡಿ

Bheema-Naik

ಮದ್ದೂರು, ಡಿ.9- ಚಾಲಕ ರಮೇಶ್‍ಗೌಡ ಅವರಿಗೆ ಜೀವಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಭೂ ಸ್ವಾಧೀನಾಧಿಕಾರಿ ಭೀಮಾನಾಯ್ಕ್ ಅವರಿಗೆ ಮದ್ದೂರು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನಡುವೆ ರಮೇಶ್‍ನ ಬ್ಯಾಂಕ್ ಖಾತೆಗಳಿಗೆ ಹಣ ಬದಲಾವಣೆಯಾಗಿದೆಯೆಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ರಮೇಶ್ ಹಾಗೂ ಇವರ ಸಂಬಂಧಿಕರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ರಮೇಶ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‍ನೋಟ್‍ನಲ್ಲಿ ಭೀಮಾನಾಯ್ಕ್ ಮತ್ತು ಇವರ ಖಾಸಗಿ ವಾಹನ ಚಾಲಕನ ಹೆಸರು ಕೇಳಿ ಬಂದ ನಂತರ ಭೀಮಾನಾಯ್ಕ್ ನಾಪತ್ತೆಯಾಗಿದ್ದಾರೆ.

ಇವರ ಪತ್ತೆಗಾಗಿ ಮೂರು ತಂಡ ರಚಿಸಲಾಗಿದ್ದು, ಈ ತಂಡ ರಾಜ್ಯದ ವಿವಿಧೆಡೆ ತೆರಳಿ ಮಾಹಿತಿ ಕಲೆ ಹಾಕುತ್ತಿದೆ. ಲಾಡ್ಜ್‍ನಲ್ಲಿ ದೊರೆತ ಡೆತ್‍ನೊಟನ್ನು ಎಸಿಬಿ ಮತ್ತು ಐಟಿ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಎಸ್‍ಪಿ ಸುಧೀರ್‍ರೆಡ್ಡಿ ತಿಳಿಸಿದ್ದಾರೆ. ಲಾರ್ಡ್‍ನಲ್ಲಿ ರಮೇಶ್ ರೂಂ ಮಾಡಿಕೊಂಡಿದ್ದಾಗ ಜತೆಯಲ್ಲಿದ್ದ ಸ್ನೇಹಿತರಾದ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಶನ್ವಾ ಡೈಮಂಡ್ ಕಾರ್ಖಾನೆ ಕಾರ್ಮಿಕರಾದ ಶಶಿಕುಮಾರ್ ಮತ್ತು ಕಾಂತಳಾರಾಜು ಹಾಗೂ ಲಾಡ್ಜ್ ಮ್ಯಾನೇಜರ್, ರೂಂಬಾಯ್‍ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂಬ ಅನುಮಾನ ಸ್ವಲ್ಪವೂ ನಮಗೆ ಬರಲಿಲ್ಲ. ನಾವು ಆತ ಲಾಡ್ಜ್‍ನಲ್ಲಿ ರೂಂ ಮಾಡಿಕೊಂಡು ಒಂದು ದಿನ ಇರುವುದಾಗಿ ಹೇಳಿ ನಂತರ ಎರಡು ದಿನಕ್ಕೆ ರೂಂ ಪಡೆದು ಹೊರಗಿನಿಂದ ನಮ್ಮ ಬಳಿ ಊಟ ತರಿಸಿಕೊಳ್ಳುತ್ತಿದ್ದನಷ್ಟೆ. ಆತ ನಮ್ಮ ಬಳಿ ಏನೂ ಹೇಳಿಕೊಂಡಿರಲಿಲ್ಲ ಎಂದು ಸ್ನೇಹಿತರಿಬ್ಬರು ಪೊಲೀಸರ ಮುಂದೆ ತಿಳಿಸಿದ್ದಾರೆ.
ಭೀಮಾನಾಯ್ಕ್ ಅವರು ಚಾಲಕ ರಮೇಶನಿಗೆ ಕಪ್ಪು ಹಣವನ್ನು ಬಿಳಿ ಮಾಡಿಕೊಡಲು ಕೊಟ್ಟಿದ್ದರು ಎನ್ನಲಾಗಿದ್ದು, ಹಣ ಹಿಂದಿರುಗಿಸುವ ಸಂದರ್ಭದಲ್ಲಿ 8ರಿಂದ 10 ಲಕ್ಷ ವ್ಯತ್ಯಾಸ ಕಂಡುಬಂದಿದ್ದರಿಂದ ಈ ಹಣ ಹಿಂದಿರುಗಿಸಲು ಹೇಳಿದ್ದರಿಂದ ವಿವಾದ ಉಂಟಾಗಿತ್ತು. ರಮೇಶನಿಗೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಇದರಿಂದ ಹೆದರಿದ ಮಹೇಶ್ ಮದುವೆಗೆ ಹೋಗಬೇಕೆಂದು ಹೇಳಿ ಬೆಂಗಳೂರಿನಿಂದ ತನ್ನ ಊರಿಗೆ ಬಂದು ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ನಂತರ ಕುಟುಂಬದವರನ್ನು ಮಾತನಾಡಿಸಿಕೊಂಡು ಇಬ್ಬರು ಸ್ನೇಹಿತರೊಂದಿಗೆ ಸಂವೃದ್ ಲಾಡ್ಜ್‍ಗೆ ಬಂದು 11 ಪುಟಗಳ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin