ವಿಚ್ಛೇದನ ತಂದ ನೋವು : ಮಗಳಿಗೆ ವಿಷವಿಟ್ಟು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Madduru-Suicide

ಮದ್ದೂರು,ಜ.13- ವಿವಾಹ ವಿಚ್ಛೇದನದಿಂದ ಮನನೊಂದಿದ್ದ ಶಿಕ್ಷಕಿಯೊಬ್ಬರು ತನ್ನ ಮಗಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮದ್ದೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.   ಘಟನೆಯಲ್ಲಿ ನಿಧಿ(8) ಮೃತಪಟ್ಟಿದ್ದು , ತಾಯಿ ಯಶಸ್ವಿನಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಕರುಳಕುಡಿ ತೀರಿಕೊಂಡಿರುವ ವಿಷಯ ಆಕೆಗಿನ್ನೂ ತಿಳಿದಿಲ್ಲ. ತಾಯಿ ಯಶಸ್ವಿನಿ ಕೋಮಾವಸ್ಥೆಯಲ್ಲಿದ್ದು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾಳೆ.

ಘಟನೆ ವಿವರ:

ಮದ್ದೂರು ತಾಲ್ಲೂಕು ಕೆಸ್ತೂರಿನ ನರಸಿಂಹಯ್ಯ-ಸುಜಾತ ದಂಪತಿಗಳ ಪುತ್ರಿಯಾದ ಯಶಸ್ವಿನಿಯನ್ನು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಸಿದ್ದರಾಜು ಎಂಬುವರಿಗೆ 10 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.  ಕೆಲವು ವರ್ಷಗಳ ನಂತರ ದಂಪತಿಗಳ ನಡುವೆ ವಿರಸ ಉಂಟಾಗಿ ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನವನ್ನು ಪಡೆದಿದ್ದರು.  ಯಶಸ್ವಿನಿ ತನ್ನ ಮಗು ನಿಧಿ ಹಾಗೂ ತಾಯಿ ಸುಜಾತ ಅವರೊಂದಿಗೆ ಮದ್ದೂರಿನ ವಿಶ್ವೇಶ್ವರನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ತನ್ನ ಜೀವನ ನಿರ್ವಹಣೆಗಾಗಿ ತನ್ನ ಮಗು ದಾಖಲಾಗಿದ್ದ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ವಿಚ್ಛೇಧನದಿಂದ ಜಿಗುಪ್ಸೆಗೊಂಡಿದ್ದ ಯಶಸ್ವಿನಿ ವೈಕುಂಠ ಏಕಾದಶಿಯಂದು(ಜ.8) ಮದ್ದೂರು-ನಗರಕೆರೆ ರಸ್ತೆಯ ವೈದ್ಯನಾಥಪುರದ ಕಮಾನು ದ್ವಾರದ ಬಳಿ ತನ್ನ ಮಗುವಿಗೆ ವಿಷಪ್ರಾಶನ ಮಾಡಿಸಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin