ವಿಚ್ಛೇದಿತ ಪತ್ನಿಗೆ ಪತಿಯ ವೇತನದಲ್ಲಿ ಶೇ.25ರಷ್ಟು ಜೀವನಾಂಶ : ಸುಪ್ರೀಂ ಮಹತ್ವದ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

Supreme-Courtgf

ನವದೆಹಲಿ, ಏ.21- ವಿಚ್ಧೇದಿತ ಅಥವಾ ಪರಿತ್ಯಕ್ತ ಪತ್ನಿಯ ನಿರ್ವಹಣೆಗಾಗಿ ಮಾಜಿ ಪತಿ ನೀಡಬೇಕಾದ ಜೀವನಾಂಶ ಮಾನದಂಡವನ್ನು ನಿಗದಿಗೊಳಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ತಲೆದೋರಿರುವ ಜೀವನಾಧಾರ ಮೊತ್ತ ಗೊಂದಲ ನಿವಾರಣೆಗೆ ಮುಂದಾಗಿದೆ. ಪತಿಯನ್ನು ತೊರೆದ ಮಹಿಳೆಗೆ ಆತನ ನಿವ್ವಳ ವೇತನದಲ್ಲಿ ಶೇ.25ರಷ್ಟು ಮೊತ್ತವು ಸೂಕ್ತ ಮತ್ತು ಸಮಂಜಸ ಜೀವನಾಂಶವಾಗುತ್ತದೆ ಎಂದು ಮಾನದಂಡವನ್ನು ಗೊತ್ತುಪಡಿಸಿದೆ.  ನ್ಯಾಯಮೂರ್ತಿಗಳಾದ ಆರ್. ಬಾನುಮತಿ ಮತ್ತು ಎಂ.ಎಂ. ಶಾಂತನಗೌಡರ್ ಅವರನ್ನು ಒಳಗೊಂಡ ನ್ಯಾಯಪೀಠ, ಒಂದು ನಿರ್ದಿಷ್ಟ ಪ್ರಕರಣವನ್ನು ಉಲ್ಲಂಘಿಸಿ ಈ ತೀರ್ಪು ಪ್ರಕಟಿಸಿದೆ.ಮಾಜಿ ಪತ್ನಿ ಮತ್ತು ಆಕೆಯ ಮಗನ ನಿರ್ವಹಣೆಗಾಗಿ ಮಾಸಿಕ 20,000 ರೂ.ಗಳನ್ನು ತೆಗೆದಿರಿಸುವಂತೆ ತಿಂಗಳಿಗೆ 95,527 ರೂ.ಗಳ ವೇತನ ಪಡೆಯುತ್ತಿರುವ ಪಶ್ಚಿಮ ಬಂಗಾಳದ ಹೂಗ್ಲಿ ನಿವಾಸಿಗೆ ಪೀಠ ಆದೇಶ ನೀಡಿದೆ.   ತನ್ನ ಗಂಡನಿಂದ ಪ್ರತ್ಯೇಕಗೊಂಡಿರುವ ಮಹಿಳೆಯು ಘನತೆ-ಗೌರವದಿಂದ ಜೀವನ ನಡೆಸಲು ಪರಿಹಾರ ಮೊತ್ತ ಅಥವಾ ಶಾಶ್ವತ ಜೀವನಾಂಶವು ಸೂಕ್ತ ಪ್ರಮಾಣದಲ್ಲಿರಬೇಕಾಗುತ್ತದೆ ಎಂದು ಹೇಳಿದ ಸರ್ವೊಚ್ಚ ನ್ಯಾಯಾಲಯವು, ಈ ಮೊತ್ತ ಹೆಚ್ಚಾಗಿದೆ ಎಂಬ ಮಾಜಿ ಪತಿಯ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin