ವಿಜಯವಾಡ ಬಳಿ ಕಾಲುವೆಗೆ ಉರುಳಿದ ಬಸ್ : 11 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bus-Accident---0-----01

ವಿಜಯವಾಡ, ಫೆ.28-ಬಸ್ಸೊಂದು ನದಿಗೆ ಬಿದ್ದು 11 ಮಂದಿ ಮೃತಪಟ್ಟು, ಇತರ 30 ಜನರು ಗಾಯಗೊಂಡಿರುವ ದುರ್ಘಟನೆ ಇಂದು ಮುಂಜಾನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡ ಬಳಿ ಸಂಭವಿಸಿದೆ.   ಒಡಿಶಾದ ಭುವನೇಶ್ವರದಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ಖಾಸಗಿ ವೋಲ್ವೋ ಬಸ್ ಇಂದು ಬೆಳಗ್ಗೆ 5.30ರಲ್ಲಿ ಮುಳ್ಳಪ್ಪಾಡುವಿನಲ್ಲಿ ಎರಡು ಮಾರ್ಗಗಳ ಚಿಕ್ಕ ಸೇತುವೆ ಮೂಲಕ ಹಾದು ಹೋಗುವಾಗ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿತ್ತು. ಈ ದುರಂತದಲ್ಲಿ 11 ಪ್ರಯಾಣಿಕರು ಸಾವಿಗೀಡಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡ 30 ಜನರನ್ನು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಇವರಲ್ಲಿ 17 ಮಂದಿ ಸ್ಥಿತಿ ಚಿಂತಾಜನಕವಾಗಿದೆ.

ಒಡಿಶಾದಿಂದ ತೆಲಂಗಾಣಕ್ಕೆ 1,000 ಕಿ.ಮೀ. ಸಂಚರಿಸಬೇಕಿದ್ದ ದಿನಕರ್ ಟ್ರಾವೆಲ್ಸ್‍ಗೆ ಸೇರಿದ ಈ ಬಸ್ ವಿಜಯವಾಡದಲ್ಲಿ ನಿಲುಗಡೆಯಾಗಿ ಬದಲಿ ಚಾಲಕ ಪ್ರಯಾಣವನ್ನು ಮುಂದುವರಿಸಬೇಕಿತ್ತು.   ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-9ರಲ್ಲಿ ಎರಡು ಮಾರ್ಗಗಳ ಸೇತುವೆಯಲ್ಲಿ ಈ ಬಸ್ ಬ್ರಿಡ್ಜ್ ಡಿವೈಡರ್‍ಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿತ್ತು. ಬಹುಶಃ ಚಾಲಕ ಮಂಪರಿನಲ್ಲಿದ್ದಾಗ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.

ಗ್ಯಾಸ್ ಕಟರ್‍ಗಳನ್ನು ಬಳಸಿ ಪ್ರಯಾಣಿಕರು ಮತ್ತು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳುವಂತೆ ಕೃಷ್ಣಾ ಜಿಲ್ಲೆಯ ಪೊಲೀಸರಿಗೆ ಉಪ ಮುಖ್ಯಮಂತ್ರಿ (ಗೃಹ) ಚಿನ್ನ ರಾಜಪ್ಪ ಸೂಚನೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin