ವಿಜಯ್ ಮಲ್ಯ ಸಾಲಾ ಮನ್ನಾ ಮಾಡಿದ ಹಾಗೆ ನನ್ ಸಾಲಾನೂ ಮನ್ನಾ ಮಾಡಿ ..!

ಈ ಸುದ್ದಿಯನ್ನು ಶೇರ್ ಮಾಡಿ

Malya

ಮುಂಬೈ,ನ.20- ಕಳಂಕಿತ ಉದ್ಯಮಿ ವಿಜಯ್ ಮಲ್ಯ ಸೇರಿದಂತೆ ಇತರರ ಏಳು ಸಾವಿರ ಕೋಟಿ ರೂ.ಗಳ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್‍ಬಿಐ) ಮನ್ನಾ ಮಾಡಿದೆ ಎನ್ನಲಾದ ವಿವಾದ ನಡುವೆಯೇ ಮಹಾರಾಷ್ಟ್ರದ ನಾಸಿಕ್‍ನ ಪೌರಕಾರ್ಮಿಕನೊಬ್ಬ ನನ್ನ ಸಾಲವನ್ನೂ ಮನ್ನಾ ಮಾಡುವಂತೆ ಬ್ಯಾಂಕ್‍ಗೆ ಮನವಿ ಮಾಡಿದ್ದಾನೆ.  ಬಹುರಾವ್ ಸೋನಾವಾನೆ ಎಸ್‍ಬಿಐಗೆ ಪತ್ರ ಬರೆದು ಮಲ್ಯನಂತೆ ನನ್ನ 1.5 ಲಕ್ಷ ರೂ. ಸಾಲವನ್ನೂ ಮನ್ನಾ ಮಾಡುವಂತೆ ಕೋರಿದ್ದಾನೆ.  ತ್ರಯಂಬಕೇಶ್ವರ್ ನಗರಸಭೆಯಲ್ಲಿ ಪೌರಕಾರ್ಮಿಕನಾಗಿರುವ ಈತ ಶ್ರಮಜೀವಿ, ನನ್ನ ಕೌಟುಂಬಿಕ ಸಮಸ್ಯೆಗಳ ನಿರ್ವಹಣೆಗೆ ಸಾಲ ಮಾಡಿದ್ದೇನೆ. ಆದರೆ ಕಾರಣಾಂತರಗಳಿಂದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಮೋಜಿಗಾಗಿ ಕೋಟ್ಯಂತರ ರೂ. ಸಾಲ ಮಾಡಿರುವ ಧನಿಕರ ದೊಡ್ಡ ಮೊತ್ತವನ್ನೇ ಮನ್ನಾ ಮಾಡಿರುವ ಹಾಗೂ ನನ್ನಂಥ ಬಡವನ ಸಾಲದ ಹಣವನ್ನು ಮನ್ನಾ ಮಾಡಿದರೆ ದೊಡ್ಡ ನಷ್ಟವೇನೂ ಆಗುವುದಿಲ್ಲ ಎಂದು ತಮ್ಮ ಪತ್ರದಲ್ಲಿ ಕೋರಿಕೆಯ ವಾದವನ್ನು ಮಂಡಿಸಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin