ವಿಜೃಂಭಣೆಯಿಂದ ನಡೆದ ಮೇಲುಕೋಟೆ ದೇವರ ಕಿರೀಟಧಾರಣ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

melukote

ಮೇಲುಕೋಟೆ, ಅ.30-ಶ್ರೀ ಚೆಲುವನಾರಾಯಣಸ್ವಾಮಿಯವರ ರಾಜಮುಡಿ ಕಿರೀಟಧಾರಣ ಮಹೋತ್ಸವ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಇಂದು ತೊಟ್ಟಿಲುಮಡು ಜಾತ್ರೆ ಆರಂಭವಾಗಿದ್ದು ನೂರಾರು ದಂಪತಿಗಳು ಸೇರಿದಂತೆ ಸಹಸ್ರಾರು ಭಕ್ತರು ಭಾಗಿಯಾಗಿದ್ದಾರೆ. ಸಂಜೆ ತೊಟ್ಟಿಲಮಡು ಬಳಿ ಜಾತ್ರೆ ನಡೆಯಲಿದೆ. ಮೈಸೂರು ರಾಜ ಒಡೆಯರ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಗಂಡುಬೇರುಂಡ ಲಾಂಛನ ಹೊಂದಿದ ವಜ್ರ ಖಚಿತ ರಾಜಮುಡಿ ಕಿರೀಟ ಮತ್ತು ಗಂಡುಬೇರುಂಡ ಪದಕ, ಪದ್ಮಪೀಠ, ಗದಾಂಗಿ, ಶಂಖ, ಚಕ್ರ, ಮುಂತಾದ ಭವ್ಯ ಆಭರಣಗಳಿಂದ ಅಲಂಕರಿಸಿ ನಾಲ್ಕೂ ಉತ್ಸವ ಬೀದಿಗಳಲ್ಲಿ ದಿವ್ಯ ಪ್ರಬಂಧ ಗೋಷ್ಠಿಯೊಂದಿಗೆ ಉತ್ಸವ ನೆರವೇರಿಸಲಾಯಿತು. ಭವ್ಯಪುಷ್ಟಾ ಹಾರ ಹಾಗೂ ಶ್ರೀದೇವಿ ಭೂದೇವಿಯರೊಂದಿಗೆ ಅಲಂಕೃತನಾದ ಸ್ವಾಮಿಯ ಉತ್ಸವವನ್ನು ನೂರಾರು ಮಂದಿ ಭಕ್ತರು ದರ್ಶನಮಾಡಿದರು.

ಮಂಡ್ಯ ಜಿಲ್ಲಾ ಖಜಾನೆಯಲ್ಲಿದ್ದ ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪೊಲೀಸ್ ಪಹರೆಯ ಮೂಲಕ ಮೇಲುಕೋಟೆಗೆ ತರಲಾಯಿತು. ಊರ ಹೊರಗಿನ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ರಾಜಮುಡಿ ಪೆಟ್ಟಿಗೆ ಇರಿಸಿ ಭದ್ರತಾ ಅಧಿಕಾರಿಗಳಿಗೆ ಮಾಲೆ ಮರ್ಯಾದೆ ಅರ್ಪಿಸಿದ ನಂತರ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಯಿತು. ಬೊಕ್ಕಸದ ಬಳಿ ಸ್ಥಾನೀಕರು, ಅರ್ಚಕರು ಪರಿಚಾರಕರ ಸಮಕ್ಷಮ ಪಾರ್ಕಾವಣೆಮಾಡಿ ಆಭರಣಗಳನ್ನು ಪರಿಶೀಲಿಸಿ ದೇವರಧಾರಣೆಗಾಗಿ ಅರ್ಚಕರು ಮತ್ತು ಸ್ಥಾನೀಕರ ವಶಕ್ಕೆ ನೀಡಲಾಯಿತು.

Facebook Comments

Sri Raghav

Admin