ವಿಜೃಂಭಣೆಯ ಸಂತ ಸೇವಾಲಾಲ ಮಹಾರಾಜರ ಜಯಂತ್ಯೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

23

ಗಜೇಂದ್ರಗಡ,ಫೆ.28– 278ನೇ ಸಂತ ಸೇವಾಲಾಲ ಮಹಾರಾಜರ ಜಯಂತಿಯನ್ನು ಗೋರಜಂಜಾರ ಸಮಾಜದ ಭಾಂದವರು ವಿಜೃಂಭಣೆಯಿಂದ ನಿನ್ನೆ ರಾಜೂರ ಗ್ರಾಮದಲ್ಲಿ ಆಚರಿಸಿದರು.ಸಂತ ಸೇವಾಲಾಲ ಮಹಾರಾಜರ ಜಯಂತಿ ಪ್ರಯುಕ್ತ ಭಕ್ತರು ಸಂತ ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆ, ಸಂಗೀತ ವಾದ್ಯ ಮೇಳದೊಂದಿಗೆ ಸಂಚರಿಸಿತು. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಲಂಬಾಣಿ ಮಹಿಳೆಯರ ನೃತ್ಯ ನೆರೆದಿದ್ದವರ ಮನಸೂರೆಗೊಳಿಸಿತು.ಈ ಸಂದರ್ಭದಲ್ಲಿ ಶಿವಕುಮಾರ ಜಾಧವ ಮಾತನಾಡಿ, ಅವೈಜ್ಞಾನಿಕ ಸದಾಶಿವ ಆಯೋಗವನ್ನು ಕೈಬಿಡಬೇಕು. ಬಂಜಾರ ಸಮಾಜವು ತೀರ ಹಿಂದುಳಿದ ಜನಾಂಗವಾಗಿದೆ. ಈ ಸಮಾಜದ ಒಳಿತಿಗಾಗಿ ಶ್ರಮಿಸಿದ ಸಂತ ಶ್ರೀ ಸೇವಾಲಾಲ ಮಹಾರಾಜರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲೆಡೆ ಬಂಜಾರ ಸಮೂದಾಯದವರು ಫೆ.15ರಂದು ಸೇವಾಲಾರರ ಜಯಂತಿ ಆಚರಿಸುತ್ತಾರೆ. ಆದ್ದರಿಂದ ಅಂದಿನ ದಿನವನ್ನು ಸರ್ಕಾರಿ ಕಛೇರಿಗಳಲ್ಲಿ ಸಂತ ಸೇವಾಲಾಲರ ಜಯಂತಿ ಆಚರಿಸಬೇಕು ಎಂದು ಅವರು ಆಗ್ರಹಿಸಿದರು.

ಸೇವಾಲಾಲ ಮಹಾರಾಜರ ಜಯಂತಿಯ ಅಂಗವಾಗಿ ಬಂಜಾರ ಸಮಾಜದ ಎಲ್ಲ ಭಾಂಧವರು 21 ದಿನಗಳ ವೃತಾಚರಣೆ ಮಾಡುತ್ತಾರೆ. ವೃತ ಮಾಲಾರ್ಚಣೆ ಅಭಿಯಾನ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಫೆ.15ರಂದು ರಾಜ್ಯಾಧ್ಯಂತ ಸೇವಾಲಾಲ ಜಯಂತಿಯನ್ನುಎಲ್ಲ ತಾಂಡಾಗಳಲ್ಲಿ ಆಚರಿಸಲಾಗುತ್ತದೆ. ರಾಜ್ಯದಲ್ಲಿ ಬಂಜಾರ ಸಮೂದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಬಂಜಾರ ಸಮಾಜಕ್ಕೆ ಅನುಕೂಲವಾಗಲೆಂದು ಬಂಜಾರ ನಿಗಮ ಮಂಡಳಿಯನ್ನು ಸ್ಥಾಪಿಸಿ ಸಮಾಜದ ಏಳ್ಗೆಗೆ ಶ್ರಮಿಸಿತ್ತು. ಅದರಂತೆ ಸರ್ಕಾರ ಸೇವಾಲಾಲ್ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಮೆರವಣಿಗೆಯಲ್ಲಿ ಪರಪ್ಪ ರಾಠೋಡ, ತುಕಪ್ಪ ನಾಯಕ, ಪಡಿಯಪ್ಪಕಾರಬಾರಿ, ಧಾವಜಪ್ಪರಾಠೋಡ, ಫೀರಪ್ಪರಾಠೋಡ, ಭಿಮಪ್ಪಚವ್ಹಾಣ, ಶರಣಪ್ಪಜಾಧವ, ಕೇಶಪ್ಪರಾಠೋಡ, ನೂರಪ್ಪರಾಠೋಡ, ತುಳಜಪ್ಪ ಚವ್ಹಾಣ, ಪರಸಪ್ಪರಾಠೋಡ, ಲಚ್ಚಪ್ಪರಾಠೋಡ, ಛತ್ರಪ್ಪರಾಠೋಡ ಸೇರಿದಂತೆ ನೂರಾರು ಸಮಾಜ ಭಾಂದವರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin