ವಿಥ್ ಡ್ರಾ ಮಿತಿ ಸಡಿಲಿಸಿದ ಆರ್‍ಬಿಐ, ಇನ್ನು ವಾರಕ್ಕೆ 50,000ರೂ. ಪಡೆಯಬಹುದು

ಈ ಸುದ್ದಿಯನ್ನು ಶೇರ್ ಮಾಡಿ

RBI-Bank-Note

ನವದೆಹಲಿ, ಫೆ.20-ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಬ್ಯಾಂಕ್‍ಗಳಿಂದ ಹಣ ಪಡೆಯಲು ವಿಧಿಸಲಾಗಿದ್ದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಸಡಿಲಿಸಿದೆ. ಇಂದಿನಿಂದ ವಾರಕ್ಕೆ 50,000 ರೂ.ಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಮಾರ್ಚ್ 13ರಿಂದ ನಗದು ವಿತ್‍ಡ್ರಾ ಮಾಡಲು ಯಾವುದೇ ಮಿತಿ ಇಲ್ಲ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ.   ನಿನ್ನೆವರೆಗೆ ವಾರಕ್ಕೆ 24,000 ರೂ.ಗಳನ್ನು ಮಾತ್ರ ಪಡೆಯಲು ಅವಕಾಶ ಇತ್ತು. ಇಂದಿನಿಂದ ವಿತ್‍ಡ್ರಾ ಮಿತಿ ಸಡಿಲಗೊಂಡಿದೆ.

ಮುಂದಿನ ತಿಂಗಳು 13ರಿಂದ ಎಷ್ಟು ಬೇಕಾದರೂ ಹಣ ಹಿಂಪಡೆಯಬಹುದು. ಇನ್ನು ಕೆಲವೇ ವಾರಗಳಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಸುಧಾರಣೆಯಾಗಲಿದ್ದು, ನೋಟುಗಳ ಕೊರತೆ ಇರುವುದಿಲ್ಲ ಎಂದು ಆರ್‍ಬಿಐ ತಿಳಿಸಿದೆ.   ಹಣದ ಕೊರತೆ ಎದುರಿಸುತ್ತಿದ್ದ ಎಟಿಎಂಗಳು ಮತ್ತು ಬ್ಯಾಂಕುಗಳ ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದೆ. ಬಹುತೇಕ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. 500 ರೂ. ಹೊಸ ನೋಟುಗಳು ಸಹ ಲಭಿಸುತ್ತಿದ್ದು, ಚಿಲ್ಲರೆ ಸಮಸ್ಯೆ ಕಡಿಮೆಯಾಗುತ್ತಿದೆ.   ನೋಟು ಅಮಾನ್ಯದ ನಂತರ ಕರೆನ್ಸಿ ಕೊರತೆಯಿಂದ ಹೈರಾಣಾಗಿದ್ದ ಸಾರ್ವಜನಿಕರಿಗೆ ಇದರಿಂದ ಸ್ವಲ್ಪಮಟ್ಟಿನ ನಿರಾಳವಾದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin