ವಿದೇಶದಲ್ಲಿ ಡಿಕೆಶಿ : ಆಸ್ಟ್ರಿಯಾದಲ್ಲಿ ಫವಂಡ್ ಸ್ಟೋರೇಜ್ ತಂತ್ರಜ್ಞಾನದ ಅಂಧ್ಯಯನ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar ಬೆಂಗಳೂರು, ನ.3- ಆಸ್ಟ್ರಿಯಾ ಸಾಲ್ಟ್ ಬರ್ಗ್‍ನಲ್ಲಿರುವ ಫವಂಡ್ ಸ್ಟೋರೇಜ್ ಆಧಾರಿತ ವಿದ್ಯುತ್ ಘಟಕಕ್ಕೆ ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಪವರ್ ಕಾರ್ಪೊರೇಷನ್  ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದರು. ಈ ಸ್ಥಾವರದಲ್ಲಿ ಉತ್ಪಾದಿಸಲಾಗುವ 106 ಮೆಗಾವ್ಯಾಟ್ ವಿದ್ಯುತ್ ಪೈಕಿ 70 ಮೆಗಾವ್ಯಾಟ್‍ರಷ್ಟು ವಿದ್ಯುತ್ತನ್ನು ಫವಂಡ್ ಸ್ಟೋರೇಜ್ ತಂತ್ರಜ್ಞಾನ ಬಳಕೆಯಿಂದ ಉತ್ಪಾದಿಸಲಾಗುತ್ತಿದೆ. ಸೆಂಟ್ರಲ್ ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿರುವ ವಿದ್ಯುತ್‍ಗಾರಕ್ಕೆ ಲಗತ್ತಿಸಿದಂತೆ ದನುಬೆ ನದಿಯ ಆಸುಪಾಸಿನಲ್ಲಿ ಸ್ಥಾಪಿಸಲಾಗಿರುವ ನೂರಕ್ಕೂ ಹೆಚ್ಚು ಸ್ಥಾವರಗಳಿಂದ ಬರುವ ವಿದ್ಯುತ್ ಪ್ರವಾಹ ನಿಯಂತ್ರಿಸುವ ಲೋಡ್ ಡಿಸ್‍ಬ್ಯಾಚ್ ಸೆಂಟರ್‍ಗಳಿಗೆ ಡಿಕೆಶಿ ತಂಡ ಭೇಟಿ ನೀಡಿತು.

DK-Shivakumar-1

ಲೋಕಾ ಸೈಟ್ ಹಾರುಬೂದಿ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಂಗ್ರಹಿಸಲಾಗಿರುವ ಹಾರುಬೂದಿ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಜರ್ಮನಿ, ಆಸ್ಟ್ರಿಯಾ ಹಾಗೂ ಸ್ವಿಡ್ಜರ್‍ಲ್ಯಾಂಡ್ ದೇಶಗಳಲ್ಲಿ ಪ್ರವಾಸ ನಡೆಸಲಿರುವ ತಂಡ ಅಲ್ಲಿನ ವಿದ್ಯುತ್ ಉತ್ಪಾದನೆ ಸರಬರಾಜುಗಳ ಬಗ್ಗೆ ಅಧ್ಯಯನ ನಡೆಸಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin