ವಿದೇಶಿ ಪ್ರವಾಸಿಗರಿಗೆ ತಟ್ಟಿಲ್ಲ ನೋಟ್ ಬ್ಯಾನ್ ಎಫೆಕ್ಟ್

ಈ ಸುದ್ದಿಯನ್ನು ಶೇರ್ ಮಾಡಿ

notes-ban

ಬೆಂಗಳೂರು, ಜ.31– ನೋಟ್‍ಬ್ಯಾನ್ ನಂತರವೂ ಭಾರತೀಯರ ವಿದೇಶ ಪ್ರವಾಸ ಕೈಗೊಳ್ಳುವ ಉತ್ಸಾಹ ಕುಂದಿಲ್ಲ. ಕಳೆದ ವರ್ಷ ಪ್ರವಾಸಿಗರ ಸಂಖ್ಯೆ ಶೇ.27ರಷ್ಟು ಹೆಚ್ಚಾಗಿದೆ ಎಂದು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ವಿಭಾಗದಿಂದ ಭಾರತದಲ್ಲಿ ಕೆಲಸ ಮಾಡುತ್ತಿರುವ ಆನೈಲ್ ಡ್ಯೂ ಡ್ವೈಟ್ ಅವರು ಹೇಳಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೌತ್‍ಆಫ್ರಿಕಾದ 17 ಪ್ರಮುಖ ನಗರದ ಬಗ್ಗೆ ಮಾಹಿತಿ ನೀಡಿದರು. ಸುಮಾರು 1ಸಾವಿರ ಟ್ರಾವೆಲ್ ಏಜೆನ್ಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಭಾರತೀಯರು ನಿಸರ್ಗಪ್ರಿಯರು. ಸೌತ್‍ಆಫ್ರಿಕಾದಲ್ಲಿ ಹೇರಳವಾದ ಪ್ರಾಕೃತಿಕ ಸಂಪತ್ತಿದೆ. ಅಲ್ಲಿ ಅತ್ಯುನ್ನತ ದರ್ಜೆಯ ಹೋಟೆಲ್ ಹಾಗೂ ವಸತಿ ತಾಣಗಳಿವೆ. ಒಂದೂವರೆ ಲಕ್ಷದಿಂದ ಹತ್ತೂವರೆ ಲಕ್ಷದವರೆಗೂ ವಿವಿಧ ಹಂತದ ಪ್ರವಾಸಿ ಪ್ಯಾಕೆಜ್‍ಗಳಿವೆ ಎಂದು ಹೇಳಿದರು.

ಕಳೆದ ವರ್ಷ ಸುಮಾರು 81ಸಾವಿರ ಮಂದಿ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದ್ದಾರೆ. ಇದು ಹಿಂದಿನ ವರ್ಷಕ್ಕಿಂತಲೂ ಶೇ.27ರಷ್ಟು ಹೆಚ್ಚಾಗಿದೆ. ನೋಟು ಅಮಾನ್ಯಗೊಂಡ ನಂತರವೂ ಭಾರತೀಯರ ಪ್ರವಾಸದ ಉತ್ಸಾಹ ಕುಗ್ಗಿಲ್ಲ. ಅಕ್ಟೋಬರ್, ನವೆಂಬರ್, ಡಿಸೆಂಬರ್‍ನಲ್ಲಿ ಅತಿ ಹೆಚ್ಚು ಜನ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದ್ದಾರೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin