ವಿದೇಶಿ ಲೀಗ್ ಆಡುತ್ತಿರುವ ಮೊದಲ ಭಾರತೀಯ ಆಟಗಾರ ಯೂಸಫ್ ಪಠಾಣ್

ಈ ಸುದ್ದಿಯನ್ನು ಶೇರ್ ಮಾಡಿ

Yusuf-Pathan

ನವದೆಹಲಿ, ಫೆ.12- ಚೊಚ್ಚಲ ಐಪಿಎಲ್ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚಾಂಪಿಯನ್ಸ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಯೂಸಫ್ ಪಠಾಣ್ ಈಗ ವಿದೇಶಿ ಲೀಗ್ ಆಡುತ್ತಿರುವ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.  ಮಾರ್ಚ್ 8 ರಿಂದ 12ರವರೆಗೆ ನಡೆಯಲಿರುವ ಹಾಂಗ್‍ಕಾಂಗ್ ಟ್ವೆಂಟಿ-20 ಲೀಗ್‍ನಲ್ಲಿ ನ ಕೌವ್‍ಲೂನ್ ಕ್ಯಾನ್‍ಟೋಸ್ ತಂಡದ ಪರ ಭಾಗವಹಿಸುತ್ತಿದ್ದು ಈ ಸರಣಿಯು ಮುಂದಿನ ಐಪಿಎಲ್ ಋತುವಿಗೆ ತಾಲೀಮು ನಡೆಸಲು ಉತ್ತಮ ವೇದಿಕೆ ಆಗಿದೆ ಎಂದು ಯೂಸಫ್ ಹೇಳಿದ್ದಾರೆ.  ಇದೇ ಅಲ್ಲದೆ ನನಗೆ ವಿದೇಶಿ ಲೀಗ್‍ನಲ್ಲಿ ಭಾಗವಹಿಸಲು ಅರ್ಹತಾ ಪತ್ರ ನೀಡಿದ ಬಿಸಿಸಿಐ ಹಾಗೂ ಬರೋಡಾ ಕ್ರಿಕೆಟ್ ಅಸೋಸಿಯೇಷನ್‍ಗೆ ಯೂಸಫ್ ಪಠಾಣ್ ಕೃತಜ್ಞತೆ ಸಲ್ಲಿಸಿದ್ದಾರೆ.

2012ರ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಎಡವಿರುವ ಯೂಸಫ್ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಖಾಯಂ ಆಟಗಾರನಾಗಿ ಗುರುತಿಸಿಕೊಂಡಿರುವುದೇ ಅಲ್ಲದೆ ಈಗ ವಿದೇಶಿ ಲೀಗ್‍ನಲ್ಲಿ ಆಡುತ್ತಿರುವ ಮೊದಲ ಆಟಗಾರನಾಗಿ ಬಿಂಬಿತಗೊಂಡಿದ್ದಾನೆ. ಯೂಸಫ್ ಪಠಾಣ್ ಪ್ರತಿನಿಧಿಸುತ್ತಿರುವ ಕೌವ್‍ಲೂನ್ ಕ್ಯಾನ್‍ಟೋಸ್ ತಂಡದಲ್ಲಿ ಪಾಕಿಸ್ತಾನದ ಶಹಿದ್ ಆಫ್ರಿದಿ ಹಾಗೂ ಇಂಗ್ಲೆಂಡ್‍ನ ವೇಗಿ ಟೈಮಾಲ್ ಮಿಲ್ಸ್ ಕೂಡ ಸ್ಥಾನವನ್ನು ಕಂಡುಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin