ವಿದ್ಯಾರ್ಥಿಗಳು ಅನುಭವಗಳನ್ನು ಅಭಿವ್ಯಕ್ತಗೊಳಿಸಿದರೆ ಶ್ರೇಷ್ಠ ಕವಿತೆ ರಚಿಸಬಹುದು

ಈ ಸುದ್ದಿಯನ್ನು ಶೇರ್ ಮಾಡಿ

students

ರಾಮದುರ್ಗ,ಸೆ.10- ಬರಹಗಾರನ ಅನುಭವದಲ್ಲಿ ಓದುವವನೂ ಪಾಲ್ಗೊಂಡು ಅವರ ಆಶ್ವಾದದಲ್ಲಿ ಮೈಮರೆಯುವಂತೆ ಮಾಡುವ ಶಬ್ಧಗಳ ಮಾಯೆಯೇ ಉತ್ಕಷ್ಟ  ಕಾವ್ಯವಾಗಬಲ್ಲದ್ದಾಗಿದ್ದರಿಂದ ವಿದ್ಯಾರ್ಥಿಗಳು ಕಾವ್ಯ ರಚನಾ ಕ್ಷೇತ್ರಕ್ಕೆ ಕಾಲಿಡುವಾಗ ತಮ್ಮ ಅನುಭವಗಳನ್ನು ಅಭಿವ್ಯಕ್ತಗೊಳಿಸಿದರೆ ಶ್ರೇಷ್ಟ ಕವಿತೆಗಳನ್ನು ರಚಿಸಬಹುದು ಎಂದು ಕವಿಯತ್ರಿ ಹೇಮಾ ಪಟ್ಟಣಶೆಟ್ಟಿ ಅವರು ಹೇಳಿದರು.  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿನ ಸಿ.ಎಸ್. ಬೆಂಬಳಗಿ ಮಹಾವಿದ್ಯಾಲಯದ ಸಾಹಿತ್ಯಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳು ಬದುಕಿನಲ್ಲಿ ಕನಸು ಕಾಣಬೇಕು. ಯಾರು ಕನಸುಗಳನ್ನು ಕಾಣಬಲ್ಲರೊ ಅವರು ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಬಲ್ಲರು ಎಂದು ತಿಳಿಸಿದರು.

ಕಲೆ, ಸಾಹಿತ್ಯ, ಸಾಂಸ್ಕೃತಿಕಗಳು ಮನುಷ್ಯನ ಬದುಕನ್ನು ಉನ್ನತೀಕರಣ ಗೊಳಿಸುತ್ತವೆ. ವಿದ್ಯಾರ್ಥಿಗಳು ಓದು ಬರಹಗಳನ್ನು ಮೂಲಭೂತವಾಗಿಸಿ ಕೊಂಡು ಸೃಜನಾತ್ಮಕತೆ, ರಚನಾತ್ಮಕತೆಯನ್ನು ಬೆಳೆಸಿಕೊಳ್ಳುವತ್ತ ಗಮನಹರಿಸ ಬೇಕು. ಆದರೆ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕ್ಷೀಣಿಸುತ್ತಿದ್ದು ವಿಷಾದನೀಯ ಎಂದರು.ಭಾಷೆಯು ಸಂವಹನ ಮಾಧ್ಯಮವಾಗಿದ್ದು ಭಾಷೆ ಇಲ್ಲದಿದ್ದರೆ ಜನಾಂಗವೇ ಇರುತ್ತಿರಲಿಲ್ಲ. ಆದ್ದರಿಂದ ಭಾಷೆಯನ್ನು ಉಳಿಸಿ ಬೆಳೆಸಲು ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನೆಯ ಜಗೃತಿಯನ್ನು ಮೂಡಿಸುವುದು ಹಿರಿಯರ ಜವಾಬ್ದಾರಿಯಗಿದೆ ಎಂದು ಕವಿಗೋಷ್ಠಿಯನ್ನು ಉದ್ಘಾಟಿಸಿದ ಪ್ರಾಚಾರ್ಯ ಪ್ರೊ : ಎಸ್.ಎಸ್. ಕೊಡತೆ ಅವರು ತಿಳಿಸಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ ಕಾವ್ಯ ವಾಚನ ಕೇವಲ ಪದಗಳನ್ನು ಒಪ್ಪಿಸುವುದಾಗದೇ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವಂತಾಗ ಬೇಕು ಎಂದು ಹೇಳಿದರು. ಸಾಹಿತ್ಯವು ಸಮಕಾಲೀನ ಸಂದರ್ಭಗಳನ್ನು ಪ್ರತಿಬಿಂಬಿಸುತ್ತದೆ. ಇವತ್ತಿನ ಯುವ ಪೀಳಿಗೆ ತಮ್ಮ ಮುಂದಿನ ಸನ್ನಿವೇಶಗಳನ್ನು ಸಾಹಿತ್ಯದ ಮೂಲಕ ಕಟ್ಟಿಕೊಡುವ ಜವಾಬ್ದಾರಿಯುಳ್ಳವರಾಗಿದ್ದು ಸಾಹಿತ್ಯದ ಆಸಕ್ತಿ, ಅಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದು ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ತಿಳಿಸಿದರು.

ತಾಲೂಕಿನ ವಿವಿಧ ಮಹಾವಿದ್ಯಾಲಯಗಳ 16 ಜನ ವಿದ್ಯಾರ್ಥಿಗಳು ಕಾವುವಾಚನ ಮಾಡಿದರು. ಜಿಮಖಾನಾ ಉಪಾಧ್ಯಕ್ಷ ಪ್ರೊ : ಎಸ್.ಪಿ. ಮುರಾರಿ ಡಾ. ರಾಜೇಂದ್ರ ಅಣ್ಣಾನವರ, ಪ್ರೊ . ಎಸ್.ಎಂ. ಸಕ್ರಿ, ಡಾ. ಎಚ್.ಪಿ. ಹಾಲೊಳ್ಳಿ, ಪ್ರೊ . ಆರ್.ಆರ್. ಪಮ್ಮಾರ ಇತರರು ಉಪಸ್ಥಿತರಿದ್ದರು.ಕಸಾಪ ಗೌರವ ಕಾರ್ಯದರ್ಶಿ ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಸಾಹಿತ್ಯಕ ಸಂಘದ ಕಾರ್ಯಾಧ್ಯಕ್ಷ ಪ್ರೊ : ಪ್ರಕಾಶ ತೆಗ್ಗಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ ರ. ಪಿ.ಎನ್. ಕಂಬಳಿ ಕಾರ್ಯಕ್ರಮ ನಿರೂಪಿಸಿದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin