ವಿದ್ಯಾರ್ಥಿಗಳು ಉತ್ತಮ ಜನಪ್ರತಿನಿಧಿಗಳ ಆಯ್ಕೆ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

datta

ಕಡೂರು, ಸೆ.27-ಯುವಕರೇ ದೇಶದ ಭವಿಷ್ಯ ರೂಪಿಸುವಂತಹರು. ವಿದ್ಯಾರ್ಥಿಗಳು ಪ್ರಜ್ಞಾವಂತ ನಾಗರೀಕರಾಗಬೇಕಿದೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ , ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರಂಭದಲ್ಲಿ ಮಾತನಾಡುತ್ತಾ, ಪಠ್ಯೇತರರಾಗುವುದು ಮುಖ್ಯವಲ್ಲ. ಉತ್ತಮ ನಾಗರೀಕ ಸಮಾಜದವರಾಗಿರಬೇಕು. ಯಾವುದೇ ಪದವಿಗಳಿಗೆ ಅರ್ಥವಿಲ್ಲ. ಅದೇ ರೀತಿ ರಾಜಕೀಯ ಪದವಿಗಳಿಗೂ ಅರ್ಥವಿಲ್ಲ. ಇವುಗಳು ತಾತ್ಕಾಲಿಕವಾದವು ಎಂದು ಹೇಳಿದರು.

ಅಭಿವೃದ್ಧಿ ಶ್ರೀಮಂತಿಕೆ ಕೈಬಿಡಬೇಕು. ಸರಳತೆಯ ಮೌಲ್ಯ ಎಲ್ಲರಲ್ಲೂ ಆಗಬೇಕಿದೆ. ನಾವುಗಳು ಯಂತ್ರಗಳ ರೂಪದಲ್ಲಿ ಬದುಕುತ್ತಿದ್ದೇವೆ. ದೇಶಕ್ಕೆ ಭವಿಷ್ಯ ಯುವಕರಲ್ಲಿ ಸಾಧ್ಯವಿದೆ. ವಿದ್ಯಾರ್ಥಿಗಳು ಪ್ರಜ್ಞಾವಂತ ನಾಗರೀಕರಾಗಬೇಕಿದ್ದು , ಶಿಕ್ಷಕರು ಜವಾಬ್ದಾರಿಯನ್ನು ಅರಿತುಕೊಳ್ಳಬೇಕಿದೆ ಎಂದರು. ತುಮಕೂರು ವಿಶ್ವವಿದ್ಯಾನಿಲಯದ ಡಾ.ನಿತ್ಯಾನಂದ ಬಿ. ಶೆಟ್ಟಿ , ಪುರಸಭೆ ಅಧ್ಯಕ್ಷ ಎಂ. ಮಾದಪ್ಪ, ಉಪಾಧ್ಯಕ್ಷ ರಾಜೇಶ್, ಕಾಲೇಜು ಪ್ರಾಂಶುಪಾಲ ಎ.ಜಿ. ಶ್ರೀಧರಬಾಬು, ಸಾಂಸ್ಕೃತಿಕ ವೇದಿಕೆ ಸಂಚಾಲಕ ದೊರೇಶ್, ಕಾಲೇಜು ನಿರ್ದೇಶಕರಾದ ಎಂ. ರೇಣುಕಾರಾಧ್ಯ, ಸಿ.ಕೆ. ಬಸವರಾಜಪ್ಪ, ನೀಲಪ್ಪ, ಸಿ.ಕೆ. ಸ್ವಾಮಿ, ಮಂಜುನಾಥ್‍ಗುಪ್ತ, ರಾಜಶೇಖರ್, ವಸಂತ್‍ಕುಮಾರ್, ಮಂಜುನಾಥ್. ಕೆ.ಹೆಚ್. ಅಬ್ದುಲ್ ಮಜೀದ್, ನಟರಾಜ್, ಎಂ.ಆರ್. ಬಸವರಾಜ್, ಗೋಪಾಲ್. ಕೆ.ಹೆಚ್. ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin