ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrest

ಚನ್ನಪಟ್ಟಣ, ಆ.20- ಕಾಲೇಜು ವಿದ್ಯಾರ್ಥಿನಿ ಮೇಲೆ  ಹಲ್ಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಅಕ್ಕೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಾಲ್ಲೂಕಿನ ಎ.ವಿ.ಹಳ್ಳಿ ಗ್ರಾಮದ ಪುಟ್ಟಸ್ವಾಮಿ ಬಂಧಿತ ಆರೋಪಿ.ಈತ ಗ್ರಾಮದ ಎಲ್‍ಐಸಿ ಏಜೆಂಟ್ ಎಂಬುವರ ಮನೆಯಲ್ಲಿ ಅವಿತುಕೊಂಡು ಅವರ ಮಗಳ ಮೇಲೆ ತನ್ನ ಸ್ನೇಹಿತ ಸದಾಶಿವ ಎಂಬುವನ ಜೊತೆ ಸೇರಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ.

ಈ ಸಂಬಂಧ ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ನಡೆದ ಕೆಲ ದಿನಗಳಲ್ಲಿಯೇ ಆರೋಪಿ ಸದಾಶಿವನನ್ನು ಪೊಲೀಸರು ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ಪುಟ್ಟಸ್ವಾಮಿ ಪತ್ತೆಗೆ ಬಲೆ ಬೀಸಿದ್ದರು.ಆರು ತಿಂಗಳ ಕಾಲ ತಲೆ ಮರೆಸಿಕೊಂಡಿದ್ದ ಈತನನ್ನು ಠಾಣೆ ಪಿಎಸ್‍ಐ ಸದಾನಂದ, ಪೇದೆ ಸುನೀಲ್ ಹಾಗೂ ಇತರರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin