ವಿದ್ಯಾರ್ಥಿ ನಾಪತ್ತೆ ಪ್ರಕರಣ : ಹಾಸ್ಟೆಲ್ ವಾರ್ಡನ್‍ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Suspended-01

ಮಂಡ್ಯ,ಫೆ.21- ವಿದ್ಯಾರ್ಥಿ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಮಾಡಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್‍ನನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್ ಅಮಾನತು ಪಡಿಸಿದ್ದಾರೆ.  ನಾಗಮಂಗಲದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ರಾಮೇಗೌಡ ಅಮಾನತ್ತಾಗಿದ್ದು , ಪಬಾರಿ ನಿಲಯ ಪಾಲಕರಾಗಿ ಲೋಕೇಶ್ ಅವರನ್ನು ನೇಮಕ ಮಾಡಲಾಗಿದೆ. ಹಿನ್ನೆಲೆ: 27-11-2017ರಂದು ವಿದ್ಯಾರ್ಥಿ ನಿಲಯದಿಂದ 9ನೇ ತರಗತಿ ವಿದ್ಯಾರ್ಥಿ ಎಚ್.ಎಂ.ದುರ್ಗೇಶ್ ನಾಪತ್ತೆಯಾಗಿದ್ದ. ವಾರ್ಡನ್ ರಾಮೇಗೌಡ ಈ ವಿಷಯವನ್ನು ಪೋಷಕರಿಗೆ ಹಾಗೂ ಮೇಲಧಿಕಾರಿಗಳಿಗೆ ತಿಳಿಸಿರಲಿಲ್ಲ. ಪೊಲೀಸರಿಗೂ ದೂರು ನೀಡಿರಲಿಲ್ಲ. ಅಲ್ಲದೆ ವಿದ್ಯಾರ್ಥಿಗೆ ಬಯೋಮೆಟ್ರಿಕ್ ಹಾಜರಾತಿ ಕೊಟ್ಟಿರಲಿಲ್ಲ.

ಮಗನ ಕುರಿತು ವಿಷಯ ತಿಳಿಯದೆ ಪೋಷಕರು ವಿಚಾರಿಸಿದಾಗ ರಾಮೇಗೌಡ ಉಡಾಫೆ ಉತ್ತರ ಕೊಟ್ಟಿದ್ದರೆಂದು ದೂರಲಾಗಿತ್ತು. ನಂತರ ಪೋಷಕರು ನಾಗಮಂಗಲ ಠಾಣೆಗೆ ಪುತ್ರ ನಾಪತ್ತೆಯಾಗಿದ್ದಾನೆಂದು ದೂರು ನೀಡಿದ್ದರು.  ಇದೀಗ ಜಿಪಂ ಸಿಇಒ ಶರತ್ ಅವರು ರಾಮೇಗೌಡರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿ ಅವರ ಜಾಗಕ್ಕೆ ಲೋಕೇಶ್ ಎಂಬುವರನ್ನು ನೇಮಿಸಿದ್ದಾರೆ. ಆದರೆ ವಿದ್ಯಾರ್ಥಿ ದುರ್ಗೇಶ್ ಇನ್ನು ಪತ್ತೆಯಾಗಿಲ್ಲ.

Facebook Comments

Sri Raghav

Admin