ವಿದ್ಯುತ್‍ಕಂಬಕ್ಕೆ ಲಾರಿಯೊಂದು ಡಿಕ್ಕಿ : ತಪ್ಪಿದ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

bescome

ವಿಜಯಪುರ, ಫೆ.28-ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯಲ್ಲಿರುವ ಜಂಗ್ಲಿಪೀರ್‍ಬಾಬಾ ದರ್ಗಾ ಬಳಿ ವಿದ್ಯುತ್‍ಕಂಬಕ್ಕೆ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮವಾಗಿ ಎರಡಕ್ಕೂ ಹೆಚ್ಚು ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವುಂಟಾಯಿತಾದರೂ ಯಾವುದೇ ಅವಘಡಗಳು ಸಂಭವಿಸಿಲ್ಲ.ಪಟ್ಟಣದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಮಿಲಿಟರಿ ಬೈಪಾಸ್ ರಸ್ತೆಗಳು ಕೂಡುವ ಸ್ಥಳದಲ್ಲಿ ಸರ್ತೆಬದಿಯಲ್ಲಿ ಹಣ್ಣಿನ ಅಂಗಡಿಗಳಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ರಸ್ತೆಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳುತ್ತಾರೆ. ಕೋಲಾರ ಕಡೆಯಿಂದ ಬಂದ ಲಾರಿಯನ್ನು ಚಾಲಕ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಲು ಹೋಗಿ ವಿದ್ಯುತ್‍ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ತಕ್ಷಣ ಸಂಪರ್ಕವಿದ್ದ ಎರಡಕ್ಕೂ ಹೆಚ್ಚುಕಂಬಗಳು ಧರೆಗುರುಳಿದವು. ತಕ್ಷಣ ವಿದ್ಯುತ್ ಸಂಪರ್ಕವು ನಿಲುಗಡೆಯಾದ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗಿಲ್ಲ. ತಂತಿಗಳು ನೆಲಕಚ್ಚಿವೆ. ಮುಖ್ಯರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಆಗ್ರಹ: ಇತ್ತೀಚೆಗೆ ಬೆಸ್ಕಾಂನಿಂದ ಸರಬರಾಜಾಗುತ್ತಿರುವ ವಿದ್ಯುತ್ ಕಂಬಗಳು ಕಡಿಮೆ ಗುಣಮಟ್ಟದವು. ಕಂಬಗಳ ತಯಾರಿ ವೇಳೆ ಕೇವಲ ಮಧ್ಯದಲ್ಲಿ ಒಂದು ಅಥವಾ 2 ಸಣ್ಣ ಕಂಬಿಗಳನ್ನು ಮಾತ್ರ ಹಾಕಿರುತ್ತಾರೆ. ಸರಿಯಾಗಿ ಸಿಮೆಂಟ್‍ಕ್ಯೂರಿಂಗ್ ಮಾಡಿರುವುದಿಲ್ಲ. ಉತ್ತಮ ಗುಣಮಟ್ಟದ ಕಂಬಗಳನ್ನು ತಯಾರಿಸಿ ಸರಬರಾಜು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ರಸ್ತೆಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ವ್ಯತ್ಯವಾಗುತ್ತದೆ. ಆದ್ದರಿಂದ ಪೊಲೀಸರು ಕೂಡಲೇ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಗೋವಿಂದಪ್ಪ ಆಗ್ರಹಿಸಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin