ವಿದ್ಯುತ್ ಲೈನ್ಗೆ ಅಡ್ಡಲಾದ ಮರ ಕಡಿಯಲು ಮನವಿ
ಹುಳಿಯಾರು, ಸೆ.12- ಹೋಬಳಿಯ ದಸೂಡಿ ಗ್ರಾಪಂ ವ್ಯಾಪ್ತಿಯ ಎಳೆಗೊಲ್ಲರಹಟ್ಟಿಯಲ್ಲಿನ ವಿದ್ಯುತ್ ಲೈನ್ಗೆ ಅಡ್ಡಲಾಗಿರುವ ಮರದ ಕೊಂಬೆಗಳನ್ನು ಕಡಿಯುವಂತೆ ಗ್ರಾಪಂ ಉಪಾಧ್ಯಕ್ಷ ಹನುಮಂತರಾಯಪ್ಪ ಮನವಿ ಮಾಡಿದ್ದಾರೆ.ಎಳೆಗೊಲ್ಲರಹಟ್ಟಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಕೊಳವೆ ಬಾವಿಗೆ ಮೋಟರ್ ಅಳವಡಿಸಿ ಇದಕ್ಕೆ ಪ್ರತ್ಯೇಕ ವಿದ್ಯುತ್ ಲೈನ್ ಎಳೆಯಲಾಗಿದೆ. ಈ ಲೈನ್ ಈಗ ಜೋತು ಬಿದ್ದಿದ್ದು ಮರಗಳ ಕೊಂಬೆಗಳಿಗೆ ತಾಗುತ್ತಿದೆ. ಇದರಿಂದ ಲೈನ್ ಶಾರ್ಟ್ ಆಗಿ ಮೋಟರ್ ಪದೇ ಪದೇ ಸುಟ್ಟು ಹೋಗುತ್ತಿದೆ.
ಮೋಟರ್ ಸುಟ್ಟು ಹೋಗಿ ಅದನ್ನು ಮತ್ತೆ ರಿಪೇರಿ ಮಾಡಿಸಿಕೊಂಡು ಬರುವಷ್ಟು ಕಾಲ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಈ ಸಂಬಂಧ ಸೆಕ್ಷನ್ ಆಫೀಸರ್ ಅವರನ್ನು ಖುದ್ದು ಸ್ಥಳಕ್ಕೆ ಕರೆತಂದು ತೋರಿಸಿದರೂ ಮರ ಕಡಿಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ಫೋನ್ ಮಾಡಿದರೆ ಒಂದು ಸ್ವಿಚ್ ಆಫ್ ಆಗಿರುತ್ತದೆ. ಇಲ್ಲ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಗ್ರಾಮಸ್ಥರೇ ಮರಕಡಿಯುತ್ತಾರಾದರೂ ವಿದ್ಯುತ್ ಹರಿಯುತ್ತಿರುವುದರಿಂದ ಭಯ ಪಡುತ್ತಿದ್ದಾರೆ. ಹಾಗಾಗಿ ಮೇಲಾಧಿಕಾರಿಗಳು ತಕ್ಷಣ ಮರ ಕಡಿಸುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಬೇಕು ಅಥವಾ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೂ ಗ್ರಾಮಸ್ಥರೇ ಮರ ಕಡಿದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
► Follow us on – Facebook / Twitter / Google+