ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ambedkar

ಚಿಕ್ಕಮಗಳೂರು, ಆ.12- ವಿದ್ಯೆಯನ್ನು ಯಾರೂ ಕದಿಯಲು, ಹಾಳುಮಾಡಲು ಸಾಧ್ಯವಿಲ್ಲ. ವಿದ್ಯೆ ಹಂಚಿದಷ್ಟು ವೃದ್ಧಿಗೊಳ್ಳುತ್ತದೆ. ವಿದ್ಯೆಯಿಂದ ವಿನಯ, ಗೌರವ, ಕೀರ್ತಿ ಸಂಪತ್ತು ಎಲ್ಲವೂ ಸಾಧ್ಯ ಎಂದು ಸಂಘದ ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.ಅಕ್ಕಮಹಾದೇವಿ ಮಹಿಳಾ ಸಂಘವು ಸುಮಾರು 15 ಸಾವಿರ ರೂ.ಗಳ ಒಂದು ಸಾವಿರ ನೋಟ್ ಪುಸ್ತಕ ಮತ್ತು ಪೆನ್ ಪಾಠೋಪಕರಣಗಳನ್ನು ಶಂಕರಪುರದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿತರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯೆಯನ್ನು ಕಲಿಯಲು ಕಲಿಸಲು ಸದಾ ಮುಂದಾಗಿರಿ. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಸಂಘದ ಖಜಾಂಚಿ ಯಮುನಾಸಿಶೆಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಓದಿ ಕಲಿಯುವುದಕ್ಕಿಂತ ಬರೆದುಕಲಿಯುವುದರಿಂದ ವಿಷಯ ಹೆಚ್ಚು ಮನನವಾಗುತ್ತದೆ. ಭಾರತ ಸ್ವಾತಂತ್ರ್ಯಗಳಿಸಿದ್ದು ಸಾವಿರಾರು ಹೋರಾಟಗಾರರ ಬೆವರು ಮತ್ತು ರಕ್ತದ ನೆರವಿನಿಂದ. ಅವರ ಪರಿಶ್ರಮದಿಂದ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆಂಬ ಕೃತಜ್ಞತಾಭಾವ ಸದಾ ನಮ್ಮಲ್ಲಿ ಜಾಗೃತವಾಗಿರಬೇಕೆಂದರು.
ಕೋಟೆಬಡಾವಣೆಯ ಮುಖಂಡೆ ಭವಾನಿ ವಿಜಯಾನಂದ, ಮುಖ್ಯಶಿಕ್ಷಕ ಆರ್.ಎಂ.ಉಮಾಮಹೇಶ್ವರಪ್ಪ, ಶಾಲಾ ಶಿಕ್ಷಕರುಗಳಾದ ನೀಲಕಂಠ, ರುದ್ರಪ್ಪ, ಶಿವಕುಮಾರಿ, ಸಹಖಜಾಂಚಿ ರೇಖಾ ಉಮಾಶಂಕರ್, ನಿರ್ದೇಶಕಿಯರಾದ ಯಮುನಾ ಚಂದ್ರಶೇಖರ್, ಪಾರ್ವತಿ ಬಸವರಾಜ್, ಸುಮಿತ್ರಾಶಾಸ್ತ್ರಿ, ಶಿಕ್ಷಕರಾದ ರಾಘವೇಂದ್ರ ಮತ್ತು ಭಾನುಮತಿ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin