ವಿಧಾನಸಭೆಯಲ್ಲಿ ಶಾಸಕರು ರೈತರ ಪರ ಧ್ವನಿ ಎತ್ತಬೇಕು

ಈ ಸುದ್ದಿಯನ್ನು ಶೇರ್ ಮಾಡಿ

kr-pete

ಕೆ.ಆರ್.ಪೇಟೆ, ನ.4-ರೈತರ ಸಮಸ್ಯೆಗಳ ನಿರ್ಮೂಲನೆಗಾಗಿ ಶಾಸಕರು ವಿಧಾನಸಭೆಯಲ್ಲಿ ಗಟ್ಟಿಧ್ವನಿಯಲ್ಲಿ ಮಾತನಾಡಿ ಹೋರಾಟ ಮಾಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಮತ್ತು ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಆಗ್ರಹಿಸಿದರು.ರೈತರು ಬೇಸಾಯ ಮಾಡಿ ನೀರಿಲ್ಲದೇ ಕಳೆದುಕೊಂಡಿರುವ ಬೆಳೆಗಳಿಗೆ ಪ್ರತಿ ಎಕರೆಗೆ 50ಸಾವಿರ ರೂ. ಪರಿಹಾರ, ಕಬ್ಬಿಗೆ ಪ್ರತೀ ಟನ್ನಿಗೆ 3ಸಾವಿರ ರೂಪಾಯಿ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸದನದ ಗಮನ ಸೆಳೆಯಬೇಕೆಂದು ಒತ್ತಾಯಿಸಿದರು. ತಾಲೂಕು ರೈತ ಸಂಘದ ನೂರಾರು ರೈತ  ಮುಖಂಡರು     ಶಾಸಕ ನಾರಾಯಣಗೌಡರ ಮನೆಗೆ ಮುತ್ತಿಗೆ ಹಾಕಿ ಆಗ್ರಹಿಸಿದರಲ್ಲದೇ ಶಾಸಕರ ಗೈರು ಹಾಜರಿಯಲ್ಲಿ ಶಾಸಕರ ಆಪ್ತ ಸಹಾಯಕರಿಗೆ ಮನವಿ ಪತ್ರವನ್ನು ಅರ್ಪಿಸಿದರು.

ರೈತರು ಬೇಸಾಯ ಮಾಡಿ ನೀರಿನ ಕೊರತೆಯಿಂದ ಬೆಳೆಗಳನ್ನು ಕಳೆದುಕೊಂಡಿದ್ದು ಪ್ರತಿ ಎಕರೆಗೆ 50ಸಾವಿರ ರೂ.ಗಳಂತೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.ರೈತರ ಸಮಸ್ಯೆಗಳ ನಿರ್ಮಲನೆಗೆ ಸಹಕಾರವನ್ನು ನೀಡಬೇಕೆಂಬ ದೃಷ್ಠಿಯಿಂದ ಬರಪೀಡಿತ ತಾಲೂಕುಗಳ ಶಾಸಕರ ಮನೆಯ ಮುಂದೆ ಹೋಗಿ ಶಾಸಕರ ಗಮನವನ್ನು ಸೆಳೆದು ಸದನದಲ್ಲಿ ರೈತರ ಪರವಾಗಿ ಹೋರಾಟ ನಡೆಸುವಂತೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.ಒಣಗುತ್ತಿರುವ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಕಾಲುವೆಗಳಿಂದ ತಕ್ಷಣವೇ ನೀರು ಹರಿಸಲು ಸರ್ಕಾರವು ಮುಂದಾಗುವಂತೆ ಶಾಸಕರು ರೈತರ ಪರವಾಗಿ ಹೋರಾಟ ನಡೆಸಬೇಕೆಂದು ಆಗ್ರಹಿಸಿ ಶಾಸಕ ನಾರಾಯಣಗೌಡರ ಗೈರು ಹಾಜರಿಯಲ್ಲಿ ಶಾಸಕರ ಆಪ್ತ ಸಹಾಯಕ ಶ್ರೀನಿವಾಸ್ ಅವರಿಗೆ ಮನವಿ ಪತ್ರವನ್ನು ಅರ್ಪಿಸಿದರು.

ಪಟ್ಟಣ ಪೊಲೀಸ್  ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅರುಣ್‍ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್  ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಧ್ಯಕ್ಷ ಮರುವನಹಳ್ಳಿ ಶಂಕರ್, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಮುದುಗೆರೆ ನಾಗೇಗೌಡ, ರಾಜ್ಯ ಉಪಾಧ್ಯಕ್ಷ ಕೆ.ಆರ್.ಜಯರಾಂ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಂದಿನಿ ಜಯರಾಂ, ಲಕ್ಷ್ಮೀದೇವಮ್ಮ, ಲಕ್ಷ್ಮೀಪುರ ಜಗಧೀಶ್, ಪಿಬಿ ಮಂಚನಹಳ್ಳಿ ನಾಗಣ್ಣಗೌಡ, ನೀತಿಮಂಗಲ ಮಹೇಶ್, ಸಿಂಧುಘಟ್ಟ ಮುದ್ದುಕುಮಾರ್ ಮತ್ತಿತರರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin